ADVERTISEMENT

PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2023, 4:30 IST
Last Updated 7 ನವೆಂಬರ್ 2023, 4:30 IST
<div class="paragraphs"><p>146 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟರ್ ಓರ್ವ 'ಟೈಮ್ಡ್ ಔಟ್' ಆಗಿದ್ದಾರೆ.</p></div>

146 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟರ್ ಓರ್ವ 'ಟೈಮ್ಡ್ ಔಟ್' ಆಗಿದ್ದಾರೆ.

   

(ಪಿಟಿಐ ಚಿತ್ರ)

ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್‌ ಔಟ್' ಆದರು.

ADVERTISEMENT

ಬಾಂಗ್ಲಾದೇಶ ವಿರುದ್ಧ ದೆಹಲಿಯಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. 

ತೀವ್ರ ಅಸಮಾಧಾನಗೊಂಡ ಏಂಜೆಲೊ ಮ್ಯಾಥ್ಯೂಸ್ 

ಹೆಲ್ಮೆಟ್‌ನ ಪಟ್ಟಿ ಹರಿದಿದ್ದರಿಂದ ವಿಳಂಬವಾಯಿತು ಎಂದು ವಿವರಣೆ ನೀಡಿದ ಮ್ಯಾಥ್ಯೂಸ್

ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಐಸಿಸಿ ನಿಯಮವಾಗಿದೆ.

ನಿಯಮದ ಪ್ರಕಾರ, ಬ್ಯಾಟರ್‌ ಟೈಮ್‌ ಔಟ್ ಆದಲ್ಲಿ ಆ ವಿಕೆಟ್‌ ಅನ್ನು ಯಾವುದೇ ಬೌಲರ್‌ಗಳ ಖಾತೆಗೂ ಸೇರ್ಪಡೆಗೊಳ್ಳುವುದಿಲ್ಲ. 

ಈ ಘಟನೆಯ ಬಳಿಕ ಬಾಂಗ್ಲಾ ಇನಿಂಗ್ಸ್ ವೇಳೆಯೂ ಆಟಗಾರರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮನವಿ ಹಿಂಪಡೆಯಲು ನಿರಾಕರಿಸಿದರು. 

ಪರ ವಿರೋಧ ಚರ್ಚಗಳಿಗೆ ಕಾರಣವಾದ ಮ್ಯಾಥ್ಯೂಸ್ ಟೈಮ್ಡ್ ಔಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.