ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ನಡೆದ ಏರ್ ಶೋ ಮೈನವಿರೇಳಿಸುವಂತಿತ್ತು. ಐಎಎಫ್‌ನ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಏರ್ ಶೋ ಪ್ರದರ್ಶಿಸಿತು. IAFನ ಒಟ್ಟು ಒಂಬತ್ತು Hawk Mk-132 SKAT ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿತು.
ಬಿಸಿಸಿಐ ಪ್ರಕಾರ, ಗಾಯಕಿ ಜೊನಿತಾ ಗಾಂಧಿ, ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ, ಆಕಾಶ ಸಿಂಗ್ ಫೈನಲ್ ಪಂದ್ಯದ ಕಾರ್ಯಕ್ರಮದಲ್ಲಿ ಪ್ರದರ್ಶಕರಾಗಿ ಭಾಗವಹಿಸಲಿದ್ದಾರೆ. ಈ ಪ್ರದರ್ಶನಗಳು ಮಧ್ಯ-ಇನಿಂಗ್ಸ್ ಮತ್ತು ಪಾನೀಯಗಳ ವಿರಾಮದ ಸಮಯದಲ್ಲಿ ನಡೆಯುತ್ತವೆ.
ಭಾರತ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಗೆದ್ದ ನಂತರ ಫೈನಲ್‌ಗೆ ಅರ್ಹತೆ ಪಡೆದಿವೆ.
ಅಭಿಮಾನಿಗಳ ದಂಡು
ನೀಲಿ ಜರ್ಸಿ, ತ್ರಿವರ್ಣ ಧ್ವಜ ಹಿಡಿದಿರುವ ಅಭಿಮಾನಿಗಳು ಭಾರತ ತಂಡದ ಗೆಲುವಿಗೆ ಶುಭ ಕೋರಿದ್ದಾರೆ. ತಮ್ಮ ನೆಚ್ಚಿನ ನಾಯಕನ ಫೋಟೊ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳಿಂದ ಕ್ರೀಡಾಂಗಣದ ರಸ್ತೆಯ ಇಕ್ಕೆಲಗಳೆಲ್ಲ ನೀಲಿಮಯವಾಗಿವೆ.
1,600 ಪೊಲೀಸ್ ಸಿಬ್ಬಂದಿ ನೇಮಕ
ಕ್ರಿಕೆಟ್ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದಕ್ಕೆ ಬಂದಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ದಟ್ಟಣೆ ನಿಯಂತ್ರಕ್ಕೆ ಸುಮಾರು 1,600 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಸಂಚಾರಿ ಪೊಲೀಸ್ ನರೇಂದ್ರ ಚೌಧರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.