ಮುಂಬೈ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರೊಂದಿಗೆ ನಾನು ಡೇಟಿಂಗ್ ನಡೆಸುತ್ತಿಲ್ಲ ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸ್ಪಷ್ಟಪಡಿಸಿದ್ದಾರೆ.
ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಹಾಗೂ 'ಕೇದಾರನಾಥ್' ಸಿನಿಮಾ ಖ್ಯಾತಿಯ ಸಾರಾ, ಹಿಂದಿ ಕಿರುತೆರೆಯ ಜನಪ್ರಿಯ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 8ನೇ ಆವೃತ್ತಿಯ ಈ ಕಾರ್ಯಕ್ರಮಕ್ಕೆ ಅವರು ನಟಿ ಅನನ್ಯಾ ಪಾಂಡೆ ಜೊತೆ ಭಾಗವಹಿಸಿದ್ದರು.
ಸದ್ಯ ಬಿಡುಗಡೆಯಾಗಿರುವ ಕಾರ್ಯಕ್ರಮದ ಪ್ರೊಮೊದಲ್ಲಿ ಗಿಲ್ ಕುರಿತು ಸಾರಾ ಹೇಳಿಕೆ ನೀಡಿದ್ದಾರೆ. ನಿರೂಪಕ ಕರಣ್ ಜೋಹರ್ ಅವರು ಗಿಲ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಪ್ರಶ್ನಿಸಿದ್ದಕ್ಕೆ, 'ನೀವು ಬೇರೊಬ್ಬ ಸಾರಾಳನ್ನು ನೋಡುತ್ತಿದ್ದೀರಿ ಗೆಳೆಯರೇ. ಸಾರಾಳ ಪೂರ್ಣ ಜಗತ್ತು ತಪ್ಪು ತಿಳಿಯಲಾದ ಸಾರಾ ಹಿಂದೆ ಬಿದ್ದಿದೆ' ಎಂದಿದ್ದಾರೆ.
ಗಿಲ್ ಹೆಸರಿನೊಂದಿಗೆ ಮತ್ತೊಬ್ಬಳು 'ಸಾರಾ'
ಡೆಂಗಿ ಜ್ವರದಿಂದಿಂದಾಗಿ ಭಾರತ ತಂಡದ ಪರ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಗಿಲ್, ಇದೀಗ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಅವರು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
ವಿಶ್ವಕಪ್ ಪಂದ್ಯವೊಂದರ ವೇಳೆ ಕ್ರಿಡಾಂಗಣದಲ್ಲಿ ಪ್ರೇಕ್ಷಕರು 'ಸಾರಾ.. ಸಾರಾ..' ಎನ್ನುತ್ತಾ, ಗಿಲ್ ಅವರನ್ನು ಕಿಚಾಯಿಸಿರುವುದು ಬೆಳಕಿಗೆ ಬಂದಿದೆ. ಆ ವೇಳೆ ವಿರಾಟ್ ಕೊಹ್ಲಿ, ಪ್ರೇಕ್ಷಕರತ್ತ ಕೈ ಬೀಸಿ, ಸಹ ಆಟಗಾರನ ಜೆರ್ಸಿ ಮೇಲಿನ ಹೆಸರು (ಗಿಲ್) ತೋರುತ್ತಾ.. ಗಿಲ್ ಎಂದು ಕರೆಯುವಂತೆ ಸನ್ಹೆ ಮಾಡಿದ್ದಾರೆ.
ಗಿಲ್ ಸದ್ಯ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ 6 ಪಂದ್ಯಗಳ 6 ಇನಿಂಗ್ಸ್‌ಗಳಿಂದ 2 ಅರ್ಧಶತಕ ಸಹಿತ 219 ರನ್ ಗಳಿಸಿದ್ದಾರೆ.
ಗಿಲ್, ನವೆಂಬರ್ 2ರಂದು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 92 ರನ್ ಗಳಿಸಿ ಔಟಾಗಿದ್ದರು. ಅವರು ಸ್ವಲ್ಪದರಲ್ಲೇ ಶತಕ ವಂಚಿತರಾದಾಗ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸಾರಾ ಬೇಸರ ವ್ಯಕ್ತಪಡಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.