ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್: ಫೈನಲ್ ಸೋತರೂ ದಾಖಲೆ ಬರೆದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 16:37 IST
Last Updated 19 ನವೆಂಬರ್ 2023, 16:37 IST
<div class="paragraphs"><p>ಭಾರತ ತಂಡ</p></div>

ಭಾರತ ತಂಡ

   

ಪಿಟಿಐ ಚಿತ್ರ

ಅಹಮದಾಬಾದ್‌: ಭಾರತ ತಂಡವು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಕಂಡರೂ, ಟೂರ್ನಿಯೊಂದರಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿತು.

ADVERTISEMENT

ಟೀಂ ಇಂಡಿಯಾ ಬೌಲರ್‌ಗಳು ಈ ಬಾರಿ 99 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2007ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ 97 ವಿಕೆಟ್‌ಗಳನ್ನು ಕಬಳಿಸಿದ್ದು ಈವರೆಗೆ ದಾಖಲೆಯಾಗಿತ್ತು.

ಸೆಮಿಫೈನಲ್‌ ಹಾಗೂ ಫೈನಲ್‌ ಸೇರಿದಂತೆ ಈ ಬಾರಿ ಆಡಿದ 11 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಟೀಂ ಇಂಡಿಯಾ ಎದುರಾಳಿ ತಂಡವನ್ನು ಆಲೌಟ್‌ ಮಾಡಿದೆ.

ಟೂರ್ನಿಯೊಂದರಲ್ಲಿ ಹೆಚ್ಚು ವಿಕೆಟ್‌ ಪಡೆದ ತಂಡಗಳು
ಭಾರತ: 2023ರ ವಿಶ್ವಕಪ್‌ನಲ್ಲಿ 99 ವಿಕೆಟ್‌
ಆಸ್ಟ್ರೇಲಿಯಾ: 2007ರ ವಿಶ್ವಕಪ್‌ನಲ್ಲಿ 97 ವಿಕೆಟ್‌
ಆಸ್ಟ್ರೇಲಿಯಾ: 2003ರ ವಿಶ್ವಕಪ್‌ನಲ್ಲಿ 96 ವಿಕೆಟ್‌
ಇಂಗ್ಲೆಂಡ್‌: 2019ರ ವಿಶ್ವಕಪ್‌ನಲ್ಲಿ 90 ವಿಕೆಟ್‌
ದಕ್ಷಿಣ ಆಫ್ರಿಕಾ: 2023ರ ವಿಶ್ವಕಪ್‌ನಲ್ಲಿ 88 ವಿಕೆಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.