ADVERTISEMENT

'ಧೋನಿ ರಿವ್ಯೂ ಸಿಸ್ಟಂ' ಈಗ 'ಡಿಸಿಷನ್ ರಾಹುಲ್ ಸಿಸ್ಟಂ'; ಕನ್ನಡಿಗನಿಗೆ ಬಹುಪರಾಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2023, 11:12 IST
Last Updated 3 ನವೆಂಬರ್ 2023, 11:12 IST
<div class="paragraphs"><p>ಕೆ.ಎಲ್. ರಾಹುಲ್</p></div>

ಕೆ.ಎಲ್. ರಾಹುಲ್

   

(ಚಿತ್ರ ಕೃಪೆ: X/@sololoveee)

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ದ ನಡೆದ ಪಂದ್ಯದಲ್ಲಿ ನಿಖರ ಡಿಆರ್‌ಎಸ್ ಮೂಲಕ ವಿಕೆಟ್ ಪಡೆಯಲು ನೆರವಾದ ಟೀಮ್ ಇಂಡಿಯಾದ ವಿಕೆಟ್ ಕೀಪರ್, ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ.

ADVERTISEMENT

ಈ ಕುರಿತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಅವರನ್ನು ಕೊಂಡಾಡಿದ್ದಾರೆ.

ಭಾರತ ಒಡ್ಡಿದ 358 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 55 ರನ್ನಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 302 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು.

ಲಂಕಾ ಇನಿಂಗ್ಸ್ ವೇಳೆ ಮೊಹಮ್ಮದ್ ಶಮಿ ಎಸೆತದಲ್ಲಿ ಬ್ಯಾಟರ್ ದುಶ್ಮಂತ ಚಮೀರ ವಿಕೆಟ್ ಪಡೆಯುವಲ್ಲಿ ರಾಹುಲ್ ಜಾಣತನವು ನೆರವಾಯಿತು.

ಮೊದಲ ನೋಟದಲ್ಲಿ ಚೆಂಡು ವೈಡ್ ಎಂಬಂತೆ ಭಾಸವಾಗುತ್ತಿತ್ತು. ಅಂಪೈರ್ ಕೂಡ ವೈಡ್ ಎಂದು ನಿರ್ಣಯ ನೀಡಿದ್ದರು. ಆ ಎಸೆತವನ್ನು ತನ್ನ ಎಡಬದಿಗೆ ಡೈವ್ ಹೊಡೆದ ರಾಹುಲ್ ಅದ್ಭುತ ಕ್ಯಾಚ್ ಪಡೆದರು. ಬಳಿಕ ಡಿಆರ್‌ಎಸ್ ಮನವಿ ಮಾಡುವಂತೆ ನಾಯಕ ರೋಹಿತ್ ಶರ್ಮಾ ಅವರನ್ನು ಒತ್ತಾಯಿಸಿದರು.

ರಾಹುಲ್ ಹೊರತುಪಡಿಸಿ ಟೀಮ್ ಇಂಡಿಯಾದ ಇತರೆಲ್ಲ ಆಟಗಾರರಿಗೆ ಈ ಬಗ್ಗೆ ಖಚಿತತೆ ಇರಲಿಲ್ಲ. ಕೊನೆಗೂ ರಾಹುಲ್ ಬೇಡಿಕೆಗೆ ಓಗೊಟ್ಟು ನಾಯಕ ರೋಹಿತ್ ಶರ್ಮಾ ಡಿಆರ್‌ಎಸ್ ಮನವಿ ಮಾಡಲು ನಿರ್ಧರಿಸಿದರು.

ಬಳಿಕ ರೀಪ್ಲೆ ಪರೀಶೀಲಿಸಿದ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು. ಈ ವೇಳೆ ಟೀಮ್ ಇಂಡಿಯಾದ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.