ADVERTISEMENT

2015, 2019ರಲ್ಲಿ ಫೈನಲ್‌ನಲ್ಲಿ ಸೋಲು; ನ್ಯೂಜಿಲೆಂಡ್‌ನ ಟ್ರೋಫಿ ಕನಸು ನನಸಾದಿತೇ?

ನಾಗರಾಜ್ ಬಿ.
Published 5 ನವೆಂಬರ್ 2023, 5:16 IST
Last Updated 5 ನವೆಂಬರ್ 2023, 5:16 IST
<div class="paragraphs"><p>ನ್ಯೂಜಿಲೆಂಡ್ ಕ್ರಿಕೆಟ್ ತಂಡ</p></div>

ನ್ಯೂಜಿಲೆಂಡ್ ಕ್ರಿಕೆಟ್ ತಂಡ

   

(ಪಿಟಿಐ ಚಿತ್ರ)

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸಲಿದೆಯೇ ಎಂಬುದು ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ಟೂರ್ನಿಯ ಆರಂಭದಲ್ಲಿ ಸತತ ನಾಲ್ಕು ಗೆಲುವಿನೊಂದಿಗೆ ಗೆಲುವಿನ ಅಭಿಯಾನ ಮುಂದುವರಿಸಿದ್ದ ನ್ಯೂಜಿಲೆಂಡ್, ಅಚ್ಚರಿಯೆಂಬಂತೆ ಬಳಿಕ ಸತತ ನಾಲ್ಕು ಸೋಲುಗಳನ್ನು ಕಂಡಿದೆ. ಇಂಗ್ಲೆಂಡ್, ನೆದರ್ಲೆಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ವಿರುದ್ಧ ಗೆಲುವು ದಾಖಲಿಸಿದ್ದ ಕಿವೀಸ್, ಆ ಬಳಿಕ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದೆ.

ಈ ಪೈಕಿ ಬೆಂಗಳೂರಿನಲ್ಲಿ ಶನಿವಾರ ಪಾಕಿಸ್ತಾನ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ 401 ರನ್ ಗಳಿಸಿಯೂ ನ್ಯೂಜಿಲೆಂಡ್ ಹಿನ್ನಡೆ ಅನುಭವಿಸಿತು.

ಸೆಮಿಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್ ಈಗ ನವೆಂಬರ್ 9 ಗುರುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅಲ್ಲದೆ ಉತ್ತಮ ರನ್‌ರೇಟ್ ಕಾಯ್ದುಕೊಳ್ಳುವ ಅಗತ್ಯವಿದೆ.

ಈಗ ಆಡಿರುವ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಹಾಗೂ ಸೋಲು ಕಂಡಿರುವ ನ್ಯೂಜಿಲೆಂಡ್ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ನ್ಯೂಜಿಲೆಂಡ್

ಚೊಚ್ಚಲ ವಿಶ್ವಕಪ್ ಟ್ರೋಫಿ ಕನಸು ನನಸಾಗಲಿದೆಯೇ ?

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿ ಎದುರು ನೋಡುತ್ತಿದೆ. ಈ ಬಾರಿಯಾದರೂ ಕನಸು ನನಸಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕಳೆದೆರಡು ಆವೃತ್ತಿಗಳಲ್ಲಿ (2015 ಹಾಗೂ 2019) ಪ್ರಶಸ್ತಿಯ ಅಂಚಿಗೆ ಬಂದು ಎಡವಿತ್ತು. 2015ರಲ್ಲಿ ಆಸ್ಟ್ರೇಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

ಇತಿಹಾಸದತ್ತ ಮೆಲುಕು ಹಾಕಿದರೆ 1975, 1979, 1992, 1999, 2007 ಹಾಗೂ 2011ನೇ ಆವೃತ್ತಿಗಳಲ್ಲಿ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಆದರೂ ಈವರೆಗೆ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ.

ಈ ಪೈಕಿ 2019ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯ 'ಟೈ' ಆಗಿತ್ತು. ಸೂಪರ್ ಓವರ್‌ನಲ್ಲೂ ಪಂದ್ಯ 'ಟೈ' ಆಗಿತ್ತು. ಬಳಿಕ ಅತಿ ಹೆಚ್ಚು ಬೌಂಡರಿ ಗಳಿಕೆ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು.

ಕೇನ್ ವಿಲಿಯಮ್ಸನ್ ಅಧ್ಬುತ ಕ್ಯಾಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.