ಲಾಹೋರ್: ಅಹಮದಾಬಾದಿನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಸಂದರ್ಭದಲ್ಲಿ ಕೆಲವು ಅಹಿತಕರ ಪ್ರಕರಣಗಳು ವರದಿಯಾಗಿವೆ. ಪಾಕ್ ಆಟಗಾರರ ವಿರುದ್ಧ ಭಾರತ ತಂಡದ ಕ್ರಿಕೆಟ್ ಅಭಿಮಾನಿಗಳ ನಡವಳಿಕೆಯ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಕಾ ಅಶ್ರಫ್ ಅವರು ಐಸಿಸಿಗೆ ಪ್ರತಿಭಟನೆ ಸಲ್ಲಿಸಿದ್ದಾರೆ.
ಪ್ರೇಕ್ಷಕರ ‘ಅನುಚಿತ ವರ್ತನೆ’ ಬಗ್ಗೆ ಪಿಸಿಬಿಯು ಮಂಗಳವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.
‘ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಅಶ್ರಫ್ ಅವರೂ ವೀಕ್ಷಿಸಿದ್ದರು. ಅಶ್ರಫ್ ಅವರನ್ನು ಬಿಸಿಸಿಐನ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಪಂದ್ಯದ ವೇಳೆ ಕೆಲವು ಪ್ರೇಕ್ಷಕರು ಪಾಕ್ ಆಟಗಾರರ ವಿರುದ್ಧ ಕೂಗಿದ ಘೋಷಣೆ, ಮತ್ತಿತರ ವಿಷಯಗಳಿಂದ ಅಶ್ರಫ್ ಅವರು ಅಸಮಾಧಾನಗೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.