ADVERTISEMENT

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಡವಿದ ದ.ಆಫ್ರಿಕಾ; ಭಾರತ–ಆಸ್ಟ್ರೇಲಿಯಾ ಫೈನಲ್ ಫೈಟ್

SA vs AUS; ಡೇವಿಡ್ ಮಿಲ್ಲರ್ ಶತಕ; ಕಮಿನ್ಸ್, ಹ್ಯಾಜಲ್‌ವುಡ್ ಅಮೋಘ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 17:10 IST
Last Updated 16 ನವೆಂಬರ್ 2023, 17:10 IST
<div class="paragraphs"><p>ಫೈನಲ್ IND vs AUS</p></div>

ಫೈನಲ್ IND vs AUS

   

icc

ಕೋಲ್ಕತ್ತ: ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾನುವಾರ ಅಹಮದಾಬಾದಿನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ADVERTISEMENT

ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು 3 ವಿಕೆಟ್‌ಗಳಿಂದ ಸೋತ ದಕ್ಷಿಣ ಆಫ್ರಿಕಾ ತಂಡವು ತನ್ನ ‘ಚೋಕರ್ಸ್‌’ ಪಟ್ಟ ಉಳಿಸಿಕೊಂಡಿತು!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಇಲ್ಲಿ ವೈಫಲ್ಯ ಅನುಭವಿಸಿದರು. ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆ ಹರಿಸಿದ್ದವರೆಲ್ಲರೂ ಪ್ಯಾಟ್ ಕಮಿನ್ಸ್ ಮತ್ತು ಜೋಷ್ ಹ್ಯಾಜಲ್‌ವುಡ್ ಅವರ ವೇಗದ ದಾಳಿಗೆ ಶರಣಾದರು. 12 ಓವರ್‌ಗಳಲ್ಲಿ 24 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆಂತಕ ಎದುರಿಸಿತು.

ಆದರೆ ಡೇವಿಡ್ ಮಿಲ್ಲರ್ (101; 116ಎ) ಶತಕದ ನೆರವಿನಿಂದ ತಂಡವು 49.4 ಓವರ್‌ಗಳಲ್ಲಿ 212 ರನ್‌ಗಳ ಮೊತ್ತ ಗಳಿಸಿತು. ಈ ಮೊತ್ತವನ್ನು ರಕ್ಷಿಸಿಕೊಂಡು ತಮ್ಮ ತಂಡವನ್ನು ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ತೆಗೆದುಕೊಂಡು ಹೋಗಲು ದಕ್ಷಿಣ ಆಫ್ರಿಕಾ ಬೌಲರ್‌ಗಳು ಮಾಡಿದ ಪ್ರಯತ್ನಕ್ಕೆ ಗೆಲುವಿನ ಗೌರವ ದೊರೆಯಲಿಲ್ಲ. ಇದರಿಂದಾಗಿ ಎಚ್ಚರಿಕೆಯಿಂದ ಆಡಿದ ಆಸ್ಟ್ರೇಲಿಯಾ ತಂಡವು 47.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 215 ರನ್ ಗಳಿಸಿತು.

ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (62; 48ಎ, 4X9, 6X2) ಮತ್ತು ಡೇವಿಡ್ ವಾರ್ನರ್ (29; 18ಎ) ಮೊದಲ ವಿಕೆಟ್‌ಗೆ 60 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಈ ರನ್‌ಗಳು ಆರು ಓವರ್‌ಗಳಲ್ಲಿ ಬಂದವು.

ಆದರೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳಾದ ಕೇಶವ ಮಹಾರಾಜ್, ತಬ್ರೇಜ್ ಶಂಸಿ, ಏಡನ್ ಮರ್ಕರಂ ಮತ್ತು ವೇಗಿ ಜೆರಾಲ್ಡ್‌ ಕೋಜಿ ಅವರ ಶಿಸ್ತಿನ ದಾಳಿಯಿಂದಾಗಿ ಆಸ್ಟ್ರೇಲಿಯಾ ವಿಕೆಟ್‌ಗಳು ಪತನವಾಗತೊಡಗಿದವು. ಆಗ ಬ್ಯಾಟರ್‌ಗಳು ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದರು.

ಇದರಿಂದಾಗಿ 23.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 137 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟರ್‌ಗಳು ನಂತರದ 78 ರನ್‌ ಸೇರಿಸಲು ಅಷ್ಟೇ ಓವರ್‌ಗಳನ್ನು ಆಡಬೇಕಾಯಿತು.

ಡೇವಿಡ್ ಮಿಲ್ಲರ್ ಶತಕ

ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಷ್ ಹ್ಯಾಜಲ್‌ವುಡ್ ಅವರ ದಾಳಿಯ ಮುಂದೆ ದಕ್ಷಿಣ ಆಫ್ರಿಕಾದ ಅಗ್ರ ಬ್ಯಾಟರ್‌ಗಳಾದ ಕ್ವಿಂಟನ್ ಡಿ ಕಾಕ್ (3 ರನ್), ರೆಸಿ ವ್ಯಾನ್ ಡೆರ್ ಡಸೆ (6 ರನ್), ಏಡನ್ ಮರ್ಕರಂ (10) ಬೇಗನೆ ಔಟಾದರು. ನಾಯಕ ತೆಂಬಾ ಬವುಮಾ ಈ ಪಂದ್ಯದಲ್ಲಿಯೂ ಫಾರ್ಮ್ ಕಂಡುಕೊಳ್ಳಲಿಲ್ಲ. ಖಾತೆಯನ್ನೂ ತೆರೆಯಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿಯೂ ಮಿಲ್ಲರ್ ಬ್ಯಾಟ್ ಬೀಸಿದರು. ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕೈಬೆರಳಿಗೆ ಚೆಂಡು ಅಪ್ಪಳಿಸಿ ನೋವು ಅನುಭವಿಸಿದರೂ ಮಿಲ್ಲರ್ ಜಗ್ಗಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ದಾಖಲಿಸಿದರು.

ಅದರಲ್ಲೂ ಆಸ್ಟ್ರೇಲಿಯಾದ ಯಶಸ್ವಿ ಸ್ಪಿನ್ನರ್ ಆ್ಯಡಂ ಜಂಪಾ ಅವರನ್ನು ಹೆಚ್ಚು ದಂಡಿಸಿದರು. ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ 94 ಮೀಟರ್ ಎತ್ತರದ ಸಿಕ್ಸರ್‌ ಎತ್ತಿದರು. ಹೆನ್ರಿಚ್ ಕ್ಲಾಸನ್ (47 ರನ್) ಅವರೊಂದಿಗಿನ ಜೊತೆಯಾಟದಲ್ಲಿ 95 ರನ್‌ ಸೇರಿಸಿದರು. ಮಿಲ್ಲರ್ 48ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಔಟಾದರು.

ಮಳೆಯಿಂದಾಗಿ 40 ನಿಮಿಷಗಳ ಕಾಲ ಆಟ ಸ್ಥಗಿತವಾಗಿತ್ತು.ಕೋಜಿ ಸಿ ಇಂಗ್ಲಿಸ್‌ ಬಿ ಕಮಿನ್ಸ್ 19 (39 ಎ., 4X2)

ದಕ್ಷಿಣ ಆಫ್ರಿಕಾ 212 (49.4 ಓವರ್)


ಡಿ ಕಾಕ್‌ ಸಿ ಕಮಿನ್ಸ್‌ ಬಿ ಹ್ಯಾಜಲ್‌ವುಡ್‌ 3 (14 ಎ)


ಬವುಮಾ ಸಿ ಇಂಗ್ಲಿಸ್‌ ಬಿ ಸ್ಟಾರ್ಕ್ 0 (4 ಎ)


ಡಸೆ ಸಿ ಸ್ಮಿತ್‌ ಬಿ ಹ್ಯಾಜಲ್‌ವುಡ್‌ 6 (31 ಎ)


ಮರ್ಕರಂ ಸಿ ವಾರ್ನರ್‌ ಬಿ ಸ್ಟಾರ್ಕ್ 10 (20 ಎ., 4X2)


ಕ್ಲಾಸನ್‌ ಬಿ ಹೆಡ್ 47 (48 ಎ., 4X4, 6X2)


ಮಿಲ್ಲರ್‌ ಸಿ ಹೆಡ್ ಬಿ ಕಮಿನ್ಸ್ 101 (116 ಎ., 4X8, 6X5)


ಯಾನ್ಸನ್ ಎಲ್‌ಬಿಡಬ್ಲ್ಯು ಬಿ ಹೆಡ್‌ 0 (1 ಎ)


ಕೇಶವ್‌ ಸಿ ಸ್ಮಿತ್‌ ಬಿ ಸ್ಟಾರ್ಕ್ 4 (8 ಎ)


ರಬಾಡ ಸಿ ಮ್ಯಾಕ್ಸ್‌ವೆಲ್‌ ಬಿ 10 (12 ಎ., 6X1)


ಶಮ್ಸಿ ಔಟಾಗದೆ 1 (5 ಎ)


ಇತರೆ: 11 (ಲೆಗ್‌ಬೈ 4, ವೈಡ್‌ 7)


ವಿಕೆಟ್‌ ಪತನ: 1–1 (ತೆಂಬಾ ಬವುಮಾ; 0.6), 2–8 (ಕ್ವಿಂಟನ್‌ ಡಿ ಕಾಕ್; 5.4), 3–22 (ಏಡನ್‌ ಮರ್ಕರಂ; 10.5), 4–24 (ರಸಿ ವ್ಯಾನ್ ಡೆರ್ ಡಸೆ; 11.5), 5–119 (ಹೆನ್ರಿಚ್‌ ಕ್ಲಾಸೆನ್; 30.4), 6–119 (ಮಾರ್ಕೊ ಯಾನ್ಸನ್; 30.5), 7–172 (ಜೆರಾಲ್ಡ್‌ ಕೋಜಿ; 43.3), 8–191 (ಕೇಶವ್‌ ಮಹಾರಾಜ್; 46.2), 9–203 (ಡೇವಿಡ್‌ ಮಿಲ್ಲರ್‌; 47.2), 10–212 (ಕಗಿಸೊ ರಬಾಡ; 49.4).

ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 10–1–34–3, ಜೋಶ್ ಹ್ಯಾಜಲ್‌ವುಡ್ 8–3–12–2, ‍ಪ್ಯಾಟ್‌ ಕಮಿನ್ಸ್ 9.4–0–51–3, ಆ್ಯಡಮ್‌ ಜಂಪಾ 7–0–55–0, ಗ್ಲೆನ್‌ ಮ್ಯಾಕ್ಸ್‌ವೆಲ್‌ 10–0–35–0, ಟ್ರಾವಿಸ್‌ ಹೆಡ್‌ 5–0–21–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.