ಅಹಮದಾಬಾದಿನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭವಾಗಲಿದೆ. ನಾಲ್ಕನೇ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತಕ್ಕೆ ಇದು ಅತ್ಯಂತ ಪ್ರತಿಷ್ಠಿತವಾಗಿದೆ. ತವರಿನ ಅಂಗಳದಲ್ಲಿ ವಿಶ್ವಕಪ್ ಜಯಿಸುವ ತವಕದಲ್ಲಿದೆ.
ಈ ವಿಶ್ವಕಪ್ ಟೂರ್ನಿಯು ಕೆಲವು ಅನುಭವಿ ಆಟಗಾರರಿಗೆ ಕೊನೆಯದಾಗಬಹುದು. ಇನ್ನು ಕೆಲವು ಯುವ ಆಟಗಾರರಿಗೆ ಇದು ಮೊದಲ ವಿಶ್ವಕಪ್ ಟೂರ್ನಿಯೂ ಆಗಲಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರಿಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆ ಇದೆ. ಮುಂದಿನ ನಾಯಕನನ್ನಾಗಿ ಮಾಡಲು ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಮೇಲೆ ಆಯ್ಕೆಗಾರರು ಕಣ್ಣು ನೆಟ್ಟಿದ್ದಾರೆ. ಈಗಾಗಲೇ ಹಾರ್ದಿಕ್ ಟಿ20 ಬಳಗದ ನಾಯಕರಾಗಿದ್ದಾರೆ. ಆದ್ದರಿಂದ ಅವರಿಗೇ ಹೆಚ್ಚು ಅವಕಾಶವಿದೆ ಎನ್ನಲಾಗಿದೆ.
ಇನ್ನುಳಿದಂತೆ; ರನ್ ಯಂತ್ರ ವಿರಾಟ್ ಕೊಹ್ಲಿ 2011ರಲ್ಲಿ ಭಾರತ ವಿಶ್ವಕಪ್ ಜಯಿಸಿದಾಗ ತಂಡದಲ್ಲಿದ್ದರು. 2019ರಲ್ಲಿ ನಾಯಕತ್ವ ವಹಿಸಿದ್ದರು. ಇದೀಗ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಈ ಟೂರ್ನಿಯಲ್ಲಿ ವಿಜೃಂಭಿಸುವ ನಿರೀಕ್ಷೆಯನ್ನೂ ಅವರು ಹುಟ್ಟುಹಾಕಿದ್ದಾರೆ. ಏಕೆಂದರೆ; ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಶತಕ ಮತ್ತು ರನ್‌ಗಳ ದಾಖಲೆ ಮುರಿಯುವ ಏಕೈಕ ಆಟಗಾರನೆಂಬ ನಿರೀಕ್ಸೆ ಅವರ ಮೇಲಿದೆ. ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅವರು ಅಮೋಘವಾಗಿ ಆಡಿದ್ದಾರೆ. ಅವರ ಅನುಭವ ಮತ್ತು ಪ್ರತಿಭೆ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಫಲಿತಾಂಶಗಳಿಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಅವರ ದೈಹಿಕ ಕ್ಷಮತೆಯೂ ಶ್ರೇಷ್ಠಮಟ್ಟದ್ದಾಗಿರುವುದರಿಂದ 2027ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದರೆ ಅಚ್ಚರಿಪಡಬೇಕಿಲ್ಲ. ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ಅದೇ ಹಾದಿಯಲ್ಲಿದ್ದಾರೆ.
ಅದೇ ರೀತಿ ಅನುಭವಿ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಅವರು ಕೂಡ ಇನ್ನೆಷ್ಟು ವರ್ಷ ಆಡಬಲ್ಲರು ಎಂಬ ಕುತೂಹಲ ಗರಿಗೆದರಿದೆ. 36 ವರ್ಷದ ಆರ್. ಅಶ್ವಿನ್ ಇದು ತಮ್ಮ ಕೊನೆಯ ವಿಶ್ವಕಪ್ ಟೂರ್ನಿ ಎಂದು ಈಗಾಗಲೇ ಹೇಳಿದ್ದಾರೆ. ಕಪ್ ಜಯಿಸಿ ವಿದಾಯ ಹೇಳುವ ಇರಾದೆ ಅವರದ್ದು.
ಉಳಿದಂತೆ ಇಶಾನ್ ಕಿಶನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಇದು ಮೊದಲ ವಿಶ್ವಕಪ್ ಟೂರ್ನಿಯಾಗಿದೆ. ತಮ್ಮ ಸೀನಿಯರ್ ಆಟಗಾರರಿಗೆ ಗೆಲುವಿನ ವಿದಾಯ ಹೇಳುವಲ್ಲಿ ಈ ಯುವಪಡೆ ಸಫಲವಾದರೆ ಭವಿಷ್ಯದ ತಾರೆಗಳಾಗುವುದು ಖಚಿತ.
ರೋಹಿತ್ ಶರ್ಮಾ (ನಾಯಕ)
ಅಗ್ರಕ್ರಮಾಂಕದ ಬಲಗೈ ಬ್ಯಾಟರ್
36 ವರ್ಷ
ಪಂದ್ಯ: 251
ರನ್: 10112
ಶುಭಮನ್ ಗಿಲ್
ಆರಂಭಿಕ ಬಲಗೈ ಬ್ಯಾಟರ್
23 ವರ್ಷ
ಪಂದ್ಯ: 35
ರನ್: 1917
ಇಶಾನ್ ಕಿಶನ್
ವಿಕೆಟ್‌ಕೀಪರ್–ಎಡಗೈ ಬ್ಯಾಟರ್
25 ವರ್ಷ
ಪಂದ್ಯ;25
ರನ್;886
ಶ್ರೇಯಸ್ ಅಯ್ಯರ್
ಅಗ್ರಕ್ರಮಾಂಕದ ಬಲಗೈ ಬ್ಯಾಟರ್
28 ವರ್ಷ
ಪಂದ್ಯ: 47
ರನ್: 1801
ವಿರಾಟ್ ಕೊಹ್ಲಿ
ಅಗ್ರಕ್ರಮಾಂಕದ ಬಲಗೈ ಬ್ಯಾಟರ್
34 ವರ್ಷ
ಪಂದ್ಯ;281
ರನ್: 13083
ಕೆ.ಎಲ್. ರಾಹುಲ್
ವಿಕೆಟ್‌ಕೀಪರ್, ಬಲಗೈ ಬ್ಯಾಟರ್
31 ವರ್ಷ
ಪಂದ್ಯ: 61
ರನ್: 2291
ಸೂರ್ಯಕುಮಾರ್ ಯಾದವ್
ಬಲಗೈ ಬ್ಯಾಟರ್
32 ವರ್ಷ
ಪಂದ್ಯ: 30
ರನ್: 661
ಹಾರ್ದಿಕ್ ಪಾಂಡ್ಯ
ಮಧ್ಯಮವೇಗಿ–ಆಲ್‌ರೌಂಡರ್
29 ವರ್ಷ
ಪಂದ್ಯ: 82
ರನ್: 1758
ವಿಕೆಟ್: 79
ರವಿಚಂದ್ರನ್ ಅಶ್ವಿನ್
ಆಫ್‌ಸ್ಪಿನ್ ಆಲ್‌ರೌಂಡರ್
36 ವರ್ಷ
ಪಂದ್ಯ;115
ರನ್; 707
ವಿಕೆಟ್; 155
ರವೀಂದ್ರ ಜಡೇಜ
ಎಡಗೈ ಸ್ಪಿನ್ –ಆಲ್‌ರೌಂಡರ್
34 ವರ್ಷ
ಪಂದ್ಯ; 186
ರನ್;2636
ವಿಕೆಟ್;204
ಜಸ್‌ಪ್ರೀತ್ ಬೂಮ್ರಾ
ಬಲಗೈ ವೇಗಿ
29 ವರ್ಷ
ಪಂದ್ಯ; 78
ವಿಕೆಟ್;129
ರನ್; 73
ಮೊಹಮ್ಮದ್ ಶಮಿ
ಬಲಗೈ ವೇಗಿ
33 ವರ್ಷ
ಪಂದ್ಯ;94
ವಿಕೆಟ್;171
ರನ್;210
ಮೊಹಮ್ಮದ್ ಸಿರಾಜ್
ಬಲಗೈ ವೇಗಿ
29 ವರ್ಷ
ಪಂದ್ಯ;34
ವಿಕೆಟ್; 54
ರನ್; 37
ಕುಲದೀಪ್ ಯಾದವ್
ಎಡಗೈ ಮಣಿಕಟ್ಟಿನ ಬೌಲರ್
28 ವರ್ಷ
ಪಂದ್ಯ; 90
ವಿಕೆಟ್: 152
ರನ್: 170
ಶಾರ್ದೂಲ್ ಠಾಕೂರ್
ಬಲಗೈ ಮಧ್ಯಮವೇಗಿ
31 ವರ್ಷ
ಪಂದ್ಯ;44
ವಿಕೆಟ್;63
ರನ್;329
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.