ಅಹಮದಾಬಾದ್: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ 1 ಒಂದು ವಿಕೆಟ್ ಪಡೆದ ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು.
ಮುರಳೀಧರನ್ 2007ರ ಟೂರ್ನಿಯಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ, ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿದ್ದರು. ಆ ದಾಖಲೆಯನ್ನು ಇದೀಗ ಜಂಪಾ ಸರಿಗಟ್ಟಿದ್ದಾರೆ. ಜಂಪಾ ಖಾತೆಯಲ್ಲಿಯೂ ಇಷ್ಟೇ ವಿಕೆಟ್‌ಗಳಿವೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅವರು ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಒಂದೇ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್‌ಗಳು
1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ): 2007ರ ವಿಶ್ವಕಪ್‌ನಲ್ಲಿ 23 ವಿಕೆಟ್
2. ಆ್ಯಡಂ ಜಂಪಾ (ಆಸ್ಟ್ರೇಲಿಯಾ): 2023ರ ವಿಶ್ವಕಪ್‌ನಲ್ಲಿ 23 ವಿಕೆಟ್
3. ಬ್ರಾಡ್ ಹಾಗ್ (ಆಸ್ಟ್ರೇಲಿಯಾ): 2007ರ ವಿಶ್ವಕಪ್‌ನಲ್ಲಿ 21 ವಿಕೆಟ್
4. ಶಾಹಿದ್ ಅಫ್ರಿದಿ (ಪಾಕಿಸ್ತಾನ): 2011ರ ವಿಶ್ವಕಪ್‌ನಲ್ಲಿ 21 ವಿಕೆಟ್
5. ಶೇನ್ ವಾರ್ನ್ (ಆಸ್ಟ್ರೇಲಿಯಾ): 1999ರ ವಿಶ್ವಕಪ್‌ನಲ್ಲಿ 20 ವಿಕೆಟ್
2023ರ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರು
1. ಮೊಹಮ್ಮದ್ ಶಮಿ (ಭಾರತ): 7 ಪಂದ್ಯಗಳಲ್ಲಿ 24 ವಿಕೆಟ್
2. ಆ್ಯಡಂ ಜಂಪಾ (ಆಸ್ಟ್ರೇಲಿಯಾ): 11 ಪಂದ್ಯಗಳಲ್ಲಿ 23 ವಿಕೆಟ್
3. ದಿಲ್ಶಾನ್ ಮಧುಶಂಕ (ಶ್ರೀಲಂಕಾ): 9 ಪಂದ್ಯಗಳಲ್ಲಿ 21 ವಿಕೆಟ್
4. ಜಸ್‌ಪ್ರಿತ್ ಬೂಮ್ರಾ (ಭಾರತ): 11 ಪಂದ್ಯಗಳಲ್ಲಿ 20 ವಿಕೆಟ್
5. ಜೆರಾಲ್ಡ್ ಕೋಜಿ (ದಕ್ಷಿಣ ಆಫ್ರಿಕಾ): 8 ಪಂದ್ಯಗಳಲ್ಲಿ 20 ವಿಕೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.