ADVERTISEMENT

CWC 2023: ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ 3ನೇ ಸಲ ಶತಕ ವಂಚಿತರಾದ ವಿರಾಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 13:30 IST
Last Updated 2 ನವೆಂಬರ್ 2023, 13:30 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಪಿಟಿಐ ಚಿತ್ರ)

ಮುಂಬೈ: ಪ್ರಸಕ್ತ ಸಾಗುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ, ಮೂರನೇ ಸಲ ಶತಕ ವಂಚಿತರಾಗಿದ್ದಾರೆ.

ADVERTISEMENT

ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲೂ ವಿರಾಟ್ ಕೊಹ್ಲಿ 88 ರನ್ ಗಳಿಸಿ ಔಟ್ ಆದರು.

ಇದೇ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 85 ರನ್ ಗಳಿಸಿ ಔಟ್ ಆಗಿದ್ದ ವಿರಾಟ್ ಬಳಿಕ ಬಾಂಗ್ಲಾದೇಶ ವಿರುದ್ಧ ಶತಕ ಗಳಿಸಿ (103) ಮಿಂಚಿದ್ದರು.

ಆದರೆ ನ್ಯೂಜಿಲೆಂಡ್ ವಿರುದ್ಧ 95 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈಗ ಲಂಕಾ ವಿರುದ್ಧದ ಪಂದ್ಯದಲ್ಲೂ ಕೇವಲ 12 ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದಾರೆ.

94 ಎಸೆತಗಳನ್ನು ಎದುರಿಸಿದ ವಿರಾಟ್ 11 ಬೌಂಡರಿಗಳ ನೆರವಿನಿಂದ 88 ರನ್ ಗಳಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ದಿಗ್ಗಜ ಸಚಿನ್ ತೆಂಡೂಲ್ಕರ್ (49) ದಾಖಲೆ ಸರಿಗಟ್ಟಲು ಕೊಹ್ಲಿಗೆ (48) ಇನ್ನು ಕೇವಲ ಒಂದು ಶತಕದ ಅಗತ್ಯವಿದೆ.

ಮತ್ತೊಂದೆಡೆ ಇದೇ ಪಂದ್ಯದಲ್ಲಿ ಶುಭಮನ್ ಗಿಲ್ (92) ಹಾಗೂ ಶ್ರೇಯಸ್ ಅಯ್ಯರ್ (82) ಸಹ ಶತಕ ವಂಚಿತರಾಗಿದ್ದಾರೆ.

ಸಚಿನ್‌ಗೆ 'ನರ್ವಸ್ ನೈಂಟಿ' ಕಾಟ...

ಸಚಿನ್ ತೆಂಡೂಲ್ಕರ್ ಹಲವು ಪಂದ್ಯಗಳಲ್ಲಿ 90–99ರ ಮಧ್ಯದಲ್ಲಿ ಔಟ್ ಆಗಿದ್ದರು. ಸಚಿನ್ ಅವರು ಏಕದಿನ ಕ್ರಿಕೆಟ್‌ನಲ್ಲಿ 18 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಲ 90ರ ಗಡಿಯಲ್ಲಿ ಔಟ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.