ADVERTISEMENT

WC: ಪಾಕ್ ವಿರುದ್ಧದ ಗೆಲುವು ಅಫ್ಗನ್ ಪೀಳಿಗೆಗೆ ಸ್ಫೂರ್ತಿದಾಯಕ– ಜೊನಾಥನ್ ಟ್ರಾಟ್

ಪಿಟಿಐ
Published 24 ಅಕ್ಟೋಬರ್ 2023, 10:10 IST
Last Updated 24 ಅಕ್ಟೋಬರ್ 2023, 10:10 IST
<div class="paragraphs"><p>ಜೊನಾಥನ್ ಟ್ರಾಟ್</p></div>

ಜೊನಾಥನ್ ಟ್ರಾಟ್

   

ಚೆನ್ನೈ: ಮುಂದಿನ ಅಫ್ಗನ್ ಪೀಳಿಗೆಗೆ ಕ್ರಿಕೆಟ್‌ ಆಟದತ್ತ ಆಸಕ್ತಿ ಬೆಳೆಸಲು ಈ ಗೆಲುವು ಚಾರಿತ್ರಿಕ ಮತ್ತು ಸ್ಫೂರ್ತಿದಾಯಕವಾಗಲಿದೆ ಎಂದು ಅಫ್ಗಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್ ಹೇಳಿದ್ದಾರೆ. 

ಚೆನ್ನೈನಲ್ಲಿ ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ  ಅಫ್ಗಾನಿಸ್ತಾನ ತಂಡ ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಬಳಿಕ ಜೊನಾಥನ್ ಟ್ರಾಟ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ಹತ್ತು ದಿನಗಳ ಒಳಗೇ ಅಫ್ಗಾನಿಸ್ತಾನ ತಂಡ, ಪಾಕಿಸ್ತಾನ ತಂಡದ ಮೇಲೂ ಏಕದಿನ ಮಾದರಿಯಲ್ಲಿ ಮೊದಲ ಬಾರಿ ಜಯಗಳಿಸಿದೆ.

‘ಮೊದಲು ಇಂಗ್ಲೆಂಡ್ ಮೇಲೆ ಗೆಲುವು. ಈಗ ಪಾಕ್‌ ಮೇಲೆ ಗೆಲುವು. ದೇಶವು ಹೊಂದಿರುವ ಕ್ರಿಕೆಟ್‌ ಪ್ರತಿಭೆಗಳ ಪ್ರಮಾಣವನ್ನು ಇದು ಮತ್ತೊಮ್ಮೆ ತೋರಿಸಿದೆ’ ಎಂದು ಟ್ರಾಟ್ ಹೇಳಿದರು.

‘ಈ ಗೆಲುವು ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಮೂಡಿಸಿದೆ. ಮುಂದಿನ ಪಂದ್ಯಗಳನ್ನೂ ನಾವು ಆತ್ಮವಿಶ್ವಾಸದಿಂದ ಎದುರು ನೋಡಲು ಸಾಧ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಾಕ್‌ ವಿರುದ್ಧ ಗೆಲುವಿನಿಂದ ಪಾಯಿಂಟ್‌ ಪಟ್ಟಿಯ ತಳದಲ್ಲಿದ್ದ ಅಫ್ಗಾನಿಸ್ತಾನ ಈಗ ಆರನೇ ಸ್ಥಾನಕ್ಕೆ ಜಿಗಿದಿದೆ.

ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ, 18 ವರ್ಷದ ಸ್ಪಿನ್ನರ್‌ ನೂರ್ ಅಹ್ಮದ್ ಅವರ ಬಗ್ಗೆಯೂ ಟ್ರಾಟ್‌ ಮೆಚ್ಚುಗೆಯ ಮಾತುಗಳನ್ನಾಡಿದರು. ಅಫ್ಗಾನ್ ತಂಡದ ಈ ರಿಸ್ಟ್‌ ಸ್ಪಿನ್ನರ್, ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ಪರ ಆಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.