ಕೋಲ್ಕತ್ತ: ‘ನನ್ನ ಹೀರೊ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿರುವುದು ಭಾವನಾತ್ಮಕ ಕ್ಷಣವಾಗಿದೆ. ಅವರ ಆಟವನ್ನೇ ನೋಡುತ್ತ ಬೆಳೆದವನು. ಏನೇ ಆದರೂ, ಅವರಷ್ಟು ಶ್ರೇಷ್ಠನಾಗಲು ನನಗೆ ಸಾಧ್ಯವಿಲ್ಲ. ಅವರು ಸದಾ ನನ್ನ ಹೀರೊ’ ಎಂದು ವಿರಾಟ್ ಕೊಹ್ಲಿ ಹೇಳಿದರು.
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ದಾಖಲಿಸಿದ ವಿರಾಟ್ ಸಚಿನ್ ಸಾಧನೆಯನ್ನು ಸರಿಗಟ್ಟಿದರು. ಪಂದ್ಯದ ನಂತರ ‘ಸ್ಟಾರ್ ಸ್ಪೋರ್ಟ್ಸ್’ನೊಂದಿಗೆ ಮಾತನಾಡಿದ ಅವರು ಸಚಿನ್ ಯಾವಾಗಲೂ ತಮಗೆ ಸ್ಪೂರ್ತಿ ಎಂದರು.
‘ಟಿ.ವಿಯಲ್ಲಿ ಅವರ ಆಟವನ್ನು ನೋ ಡುತ್ತ ಬೆಳೆದ ದಿನಗಳನ್ನು ನಾನು ಮರೆತಿಲ್ಲ. ನಾನು ಸಾಧನ ಮಾಡಿದಾಗಲೆಲ್ಲ ಅವರಿಂದ ಬರುವ ಮೆಚ್ಚುಗೆಯ ನುಡಿಗಳು ಅತ್ಯಂತ ಅಪ್ಯಾ ಯಮಾನ’ ಎಂದೂ ವಿರಾಟ್ ಹೇಳಿದರು.
ಪಂದ್ಯದ ಬಗ್ಗೆ ಮಾತನಾಡಿದ ಅವರು, ‘ಟೂರ್ನಿಯಲ್ಲಿಯೇ ಅತ್ಯಂತ ಕಠಿಣ ಸ್ಪರ್ಧೆಯೊಡ್ಡಿದ ತಂಡದ ಎದುರಿನ ಪಂದ್ಯ ಇದಾಗಿತ್ತು. ನನ್ನ ಜನ್ಮದಿನದಂದು ಇದ್ದ ಪಂದ್ಯದಲ್ಲಿ ಗೆಲುವಿನ ತುಡಿತ ಇತ್ತು. ಈ ಗೆಲುವು ಮತ್ತು ಸಾಧನೆ ನನಗಂತೂ ವಿಶೇಷ. ನಾನು ಬೆಳಿಗ್ಗೆ ಎದ್ದಾಗಲೇ, ಇದು ಕೇವಲ ಒಂದು ಪಂದ್ಯವಷ್ಟೇ ಅಲ್ಲ. ವಿಶೇಷವಾದದ್ದು ಎಂದುಕೊಂಡಿದ್ದೆ’ ಎಂದರು.
‘ಆರಂಭಿಕ ಬ್ಯಾಟರ್‌ಗಳು ಉತ್ತಮ ಆರಂಭ ನೀಡಿದರು. ಆದರೆ ಚೆಂಡು ತುಸು ಹಳೆಯದಾದಂತೆ ಚಲನೆ ನಿಧಾನವಾಗತೊಡಗಿತು. ಅದಕ್ಕೆ ತಕ್ಕಂತೆ ಆಡುತ್ತ ಮೂನ್ನೂರಕ್ಕೂ ಹೆಚ್ಚಿನ ಮೊತ್ತವನ್ನು ಪೇರಿಸುವುದೇ ಗುರಿಯಾಗಿತ್ತು. 315ಕ್ಕಿಂತ ಹೆಚ್ಚು ಮೊತ್ತ ಗಳಿಸಿದಾಗ ನಿರೀಕ್ಷೆಗಿಂತಲೂ ಮುಂದಿದ್ದೇವೆ ಎಂಬು ವಿಶ್ವಾಸ ಮೂಡಿತು. ದೇವರು ಇಂತಹದೊಂದು ಸಂತಸ ಅನುಭವಿಸಲು ಆಶೀರ್ವದಿಸಿರುವುದು ತೃಪ್ತಿಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.