ಸ್ಮಾರ್ಟ್‌ವಾಚ್ ಅಚ್ಚರಿ ಮೂಡಿಸುವಂತಹ ಹಲವು ಕೆಲಸಗಳನ್ನೂ ಮಾಡುತ್ತದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಗಳಲ್ಲಿ ಬಳಸುವ ಅದೇ ಕಾರ್ಯನಿರ್ವಹಣಾ ತಂತ್ರಾಂಶವನ್ನೂ ಇಲ್ಲೂ ಬಳಸಲಾಗುತ್ತದೆ.
ಧರಿಸಬಹುದಾದ ತಂತ್ರಜ್ಞಾನಗಳಲ್ಲಿ ಸ್ಮಾರ್ಟ್‌ವಾಚ್ ಹಲವು ವೈಶಿಷ್ಟ್ಯಗಳನ್ನು ಹೊತ್ತುಕೊಂಡು ಮಾರುಕಟ್ಟೆಗೆ ಬರುತ್ತಿವೆ. ಇತ್ತೀಚೆಗಂತೂ ಸ್ಮಾರ್ಟ್‌ಫೋನ್ ಜತೆಗೇ ಸ್ಮಾರ್ಟ್‌ವಾಚ್ ಪರಿಚಯಿಸುವ ಪರಿಪಾಟಲು ಹೆಚ್ಚಿದೆ.
ಹೆಸರೇ ಹೇಳುವಂತೆ ಸ್ಮಾರ್ಟ್‌ವಾಚ್ ಬರೀ ಸಮಯ ತೋರಿಸುವ ಸಾಮಾನ್ಯ ಚಟುವಟಿಕೆಗಳನ್ನೂ ಮೀರಿ ಅಚ್ಚರಿ ಮೂಡಿಸುವಂತಹ ಹಲವು ಕೆಲಸಗಳನ್ನೂ ಮಾಡುತ್ತದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಗಳಲ್ಲಿ ಬಳಸುವ ಅದೇ ಕಾರ್ಯನಿರ್ವಹಣಾ ತಂತ್ರಾಂಶವನ್ನೂ ಇಲ್ಲೂ ಬಳಸಲಾಗುತ್ತದೆ. ಹೆಚ್ಚಿನವುಗಳಲ್ಲಿ‘ಆಂಡ್ರಾಯ್ಡ್’ ಅಪ್ಲಿಕೇಷನ್ಸ್ ಇವೆ. ಮೊಬೈಲಿನಂತೆ ಕೈಯಲ್ಲಿ ಹಿಡಿದು ಅಥವಾ ಒಂದೆಡೆ ಇಟ್ಟು ಬಳಸುವ ಅಗತ್ಯವಿಲ್ಲ. ಮಣಿಕಟ್ಟಿನಲ್ಲಿ ಧರಿಸಿಕೊಂಡೇ ಓಡಾಡಬಹುದು. ಬೇಕೆಂದರಲ್ಲಿ, ಬೇಕಿದ್ದಾಗ ಬಳಸಬಹುದು.
ಆ್ಯಪಲ್ ಸ್ಮಾರ್ಟ್‌ವಾಚ್
ಆ್ಯಪಲ್ ಕಂಪೆನಿ ಇತ್ತೀಚೆಗಷ್ಟೇ ತನ್ನ ಐಫೋನ್6 ಮತ್ತು ಐಫೋನ್6 ಪ್ಲಸ್ ಜತೆಗೇ ಆ್ಯಪಲ್ ಸ್ಮಾರ್ಟ್‌ವಾಚನ್ನೂ ಕೂಡಾ ಮಾರುಕಟ್ಟೆಗೆ ಪರಿಚಯಿಸಿತು.
ಕೈಯಲ್ಲಿ ಧರಿಸಬಹುದಾದ ಈ ಸ್ಮಾರ್ಟ್‌ವಾಚ್ 2015ರಲ್ಲಿ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಈ ಗಡಿಯಾರದ ಬೆಲೆಯನ್ನು 349 ಅಮೆರಿಕನ್ ಡಾಲರ್ (ಸುಮಾರು ₨21 ಸಾವಿರ) ಎಂದು ನಿಗದಿಪಡಿಸಲಾಗಿದೆ. ಆ್ಯಪಲ್ ಸ್ಮಾರ್ಟ್‌ವಾಚ್ ಮೂರು ಪ್ರಕಾರಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಆ್ಯಪಲ್ ವಾಚ್, ಆ್ಯಪಲ್ ವಾಚ್ ಸ್ಪೋರ್ಟ್ ಮತ್ತು 18 ಕ್ಯಾರೆಟ್ ಚಿನ್ನದಿಂದ ಮಾಡಿರುವ ಆ್ಯಪಲ್ ವಾಚ್ ಎಡಿಷನ್ ಸೇರಿವೆ.
ಈ ಗಡಿಯಾರಗಳಲ್ಲಿ ಗೈರೊ ಸ್ಕೋಪ್ ಮತ್ತು ಆಕ್ಸಿಲಿರೊಮೀಟರ್ ಅಳವಡಿಸಲಾಗಿದೆ. ಇದರಿಂದ ಫಿಟ್‌ನೆಸ್ ಸಂಬಂಧ ಮಾಹಿತಿ ಪಡೆಯಬಹುದು. ಅಲ್ಲದೆ ಜಿಪಿಎಸ್ ಮತ್ತು ವೈ-ಫೈ ಸೌಕರ್ಯವೂ ಇದೆ. ಒಂದು ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ಕ್ರಮಿಸುವ ದೂರ, ಹವಾಮಾನ ಮತ್ತು ಸಮಯ ಕೂಡ ತಿಳಿಯಬಹುದು. ಹಣ ಪಾವತಿ ಸೌಲಭ್ಯ ‘ಆ್ಯಪಲ್ ಪೇ’ ಸೌಲಭ್ಯ ಇದರ ವಿಶೇಷತೆ. ‘ಆ್ಯಪಲ್ ಪೇ’ ಟಚ್ ಐ.ಡಿ ಮತ್ತು ಪಾಸ್‌ಬುಕ್ ಸೌಕರ್ಯ ಒಳಗೊಂಡಿದ್ದು, ಡಿಜಿಟಲ್ ವ್ಯಾಲೆಟ್ ತರಹ ಕೆಲಸ ಮಾಡುತ್ತದೆ.
ಡಿಜಿಟಲ್ ವ್ಯಾಲೆಟ್
ಅಮೆರಿಕನ್ ಎಕ್ಸ್‌ಪ್ರೆಸ್, ಮಾಸ್ಟರ್ ಕಾರ್ಡ್, ಸಿಟಿ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕ, ಕ್ಯಾಪಿಟಲ್ ಒನ್, ವೆಲ್ ಫಾರ್ಗೊ ಮತ್ತು ಚೇಸ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜಗತ್ತಿನಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಇದರಿಂದ ಸ್ಟ್ಯಾಪಲ್ಸ್, ಸ್ಟಾರ್ಬಕ್ಸ್, ಸಬ್‌ವೇ, ಮ್ಯಾಕಿಸ್, ಬ್ಲೂಮಿಂಗ್ ಡೇಲ್ಸ್, ಗ್ರೂಪ್ ಆನ್ ಮತ್ತು ಮೆಕ್ ಡೊನಾಲ್ಡ್ಸ್‌ನಲ್ಲೂ ಖರೀದಿ ಮಾಡಬಹುದು.
ಮೊಟೊರೊಲಾ
ಮೊಟೊರೊಲಾ ಕಂಪೆನಿ ಸಹ ಈ ಮೊದಲೇ ‘ಮೊಟೊ 360’ ಎಂಬ ಸ್ಮಾರ್ಟ್‌ವಾಚ್ ಪರಿಚಯಿಸಿದೆ. 1.56 ಅಂಗುಲದ ಪರದೆ, ಗೊರಿಲ್ಲಾ ಗ್ಲಾಸ್ ಸ್ಕ್ರೀನ್ ಇದರ ವಿಶೇಷತೆ.
ಸ್ಯಾಮ್ಸಂಗ್ ಗಿಯರ್ ಎಸ್
ಸ್ಯಾಮ್ಸಂಗ್‌ನ ಗಿಯರ್ ಎಸ್ ಸ್ಮಾರ್ಟ್‌ವಾಚ್‌ನಲ್ಲಿ ಟೈಜನ್ ಒಎಸ್ (ಆಪರೇಟಿಂಗ್ ಸಿಸ್ಟೆಂ) ಬಳಸಲಾಗಿದೆ. ಎರಡು ಅಂಗುಲ ಅಗಲದ ಎಎಂಒಎಲ್‌ಇಡಿ ಪರದೆಯನ್ನು ಈ ಚತುರ ಕೈಗಡಿಯಾರ ಹೊಂದಿದೆ. ಆರ್‌ಎಸ್‌ಎಸ್ ರೀಡರ್ ಸೌಲಭ್ಯವೂ ಇದರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.