ನವದೆಹಲಿ: ವಿವಿಧ ಬಗೆಯ ಭೂಪ್ರದೇಶಗಳಲ್ಲಿ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಚಿಕಿತ್ಸೆಗಾಗಿ ನವೀನ ಮಾದರಿಯ ಚಿಕಿತ್ಸಾ ಉಪಕರಣಗಳ ಅಭಿವೃದ್ಧಿಗಾಗಿ ಸಶಸ್ತ್ರ ಸೇನಾ ವೈದ್ಯಕೀಯ ಸೇವೆ (AFMS) ಹಾಗೂ ದೆಹಲಿ ಐಐಟಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ.
ಈ ಒಡಂಬಡಿಕೆಯ ಭಾಗವಾಗಿ, ಉಭಯ ಸಂಸ್ಥೆಗಳು ಸಂಶೋಧನೆ ಹಾಗೂ ಹೊಸ ಮಾದರಿಯ ಚಿಕಿತ್ಸಾ ಸಾಧನಗಳನ್ನು ಅಭಿವೃದ್ಧಿಪಡಿಸುವುದಾಗಿ ಎಂದು ರಕ್ಷಣಾ ಇಲಾಖೆ ಹೇಳಿದೆ. ಒಡಂಬಡಿಕೆಗೆ ಲೆಫ್ಟಿನೆಂಟ್ ಜನರಲ್ ದಲ್ಜಿತ್ ಸಿಂಗ್ ಹಾಗೂ ದೆಹಲಿ ಐಐಟಿ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ ಸಹಿ ಹಾಕಿದರು.
ವೈದ್ಯಕೀಯ ಸಂಶೋಧನೆಗೆ ಅಗತ್ಯವಿರುವ ಸಂಶೋಧನಾ ವ್ಯವಸ್ಥೆಯು ದೆಹಲಿ ಐಐಟಿಯಲ್ಲಿದೆ. ಸೇನೆ ಎದುರಿಸುವ ವೈದ್ಯಕೀಯ ಸವಾಲುಗಳು ಹಾಗೂ ಗಾಯಗೊಂಡವರ ಅಥವಾ ಅಂಗವಿಕಲರಾದವರ ಆರೈಕೆಗೆ ಸೌಕರ್ಯವಿದೆ. ಹೀಗಾಗಿ ದೆಹಲಿ ಐಐಟಿಯನ್ನು ಆಯ್ಕೆ ಮಾಡಲಾಯಿತು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.