ADVERTISEMENT

ಜಿಯೊ ಬಳಕೆದಾರರಿಗೆ 100 GB ಕ್ಲೌಡ್ ಸಂಗ್ರಹಣೆ ಉಚಿತ: ಮುಕೇಶ್ ಅಂಬಾನಿ

ಪಿಟಿಐ
Published 29 ಆಗಸ್ಟ್ 2024, 10:56 IST
Last Updated 29 ಆಗಸ್ಟ್ 2024, 10:56 IST
<div class="paragraphs"><p>ರಿಲಯನ್ಸ್‌ ಜಿಯೊ </p></div>

ರಿಲಯನ್ಸ್‌ ಜಿಯೊ

   

ಮುಂಬೈ: ಜಿಯೊ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹಣೆಯ ಕೊಡುಗೆ ನೀಡುವುದಾಗಿ ರಿಲಯನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಐ ಸೇವೆಗಳ ಬಲಿಷ್ಠ ಪ್ಲಾಟ್‌ಫಾರ್ಮ್‌ ರೂಪಿಸಲು ಜಿಯೊ ಬ್ರೈನ್‌ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಂಪನಿಯು ‘ಎಐ ಎವೆರಿವೇರ್ ಫಾರ್ ಎವರಿಒನ್’ ಎಂಬ ಪರಿಕಲ್ಪನೆಯಲ್ಲಿ ಇದನ್ನು ಪ್ರಾರಂಭಿಸುತ್ತಿದೆ’ ಎಂದಿದ್ದಾರೆ

ADVERTISEMENT

‘ಈ ಮೂಲಕ ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ನಿಮ್ಮ ಫೋಟೊ, ವಿಡಿಯೊ, ದಾಖಲೆಗಳು, ಡಿಜಿಟಲ್‌ ಮಾಹಿತಿ ಮತ್ತು ದತ್ತಾಂಶಗಳನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ ಇನ್ನು ಹೆಚ್ಚಿನ ಸ್ಟೋರೇಜ್‌ ಅಗತ್ಯವಿದ್ದರೆ ಅದನ್ನು ಸಹ ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದು. ಈ ದೀಪಾವಳಿಯಿಂದ ಎಲ್ಲಾ ಜಿಯೊ ಬಳಕೆದಾರರು ಈ ಸೌಲಭ್ಯ ಪಡೆಯಬಹುದು’ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಇದು ಭಾರತದಲ್ಲಿ ಎಐ ಅಪ್ಲಿಕೇಷನ್‌ಗಳನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಸಂಪರ್ಕ ಸಿಗುವಂತೆ ಮಾಡುತ್ತದೆ’ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಯೊ ಅಧ್ಯಕ್ಷ ಆಕಾಶ್ ಅಂಬಾನಿ ಹಲವು ಹೊಸ ಎಐ ಸೇವೆಗಳನ್ನು ಘೋಷಿಸಿದ್ದಾರೆ. ಜಿಯೋ ಟಿವಿಒಎಸ್ (Jio TVOS), ಹಲೋಜಿಯೋ (HelloJio), ಜಿಯೋ ಐಒಟಿ ಸಲ್ಯೂಷನ್ (Jio Home IoT), ಜಿಯೋ ಹೋಮ್ (JioHome) ಅಪ್ಲಿಕೇಷನ್ ಮತ್ತು ಜಿಯೋ ಫೋನ್ ಕಾಲ್ ಎಐ (Jio Phonecall AI) ಅನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.