ADVERTISEMENT

Ambrane AMOLED Fyre ಸ್ಮಾರ್ಟ್‌ ವಾಚ್ ಬಿಡುಗಡೆ; ವಿಶೇಷತೆ, ಬೆಲೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2023, 7:49 IST
Last Updated 10 ಅಕ್ಟೋಬರ್ 2023, 7:49 IST
<div class="paragraphs"><p>ಆಂಬ್ರೇನ್‌ ಫೈರ್ ಸ್ಮಾರ್ಟ್‌ ವಾಚ್</p></div>

ಆಂಬ್ರೇನ್‌ ಫೈರ್ ಸ್ಮಾರ್ಟ್‌ ವಾಚ್

   

ಸ್ಮಾರ್ಟ್‌ ವಾಚ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ‘ಆಂಬ್ರೇನ್‌’ ಇಂಡಿಯಾ ಕಂಪೆನಿಯು ಇದೀಗ ಫೈರ್‌(Fyre) ಹೆಸರಿನ ಹೊಸ ಸ್ಮಾರ್ಟ್‌ ವಾಚ್‌ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್‌ ಮತ್ತು ಆಂಬ್ರೇನ್‌ ವೆಬ್‌ಸೈಟ್‌ನಲ್ಲಿಯೂ ವಾಚ್‌ ಲಭ್ಯವಿದೆ.

ವಾಚ್‌ನ ಬೆಲೆ ₹1,999 ಇದ್ದು, ಫ್ಲಿಪ್‌ಕಾರ್ಟ್‌ನ ‘ಬಿಗ್ ಬಿಲಿಯನ್ ಡೇಸ್’ ಸಮಯದಲ್ಲಿ ಗ್ರಾಹಕರು ₹1,599ಕ್ಕೆ ಖರೀದಿಸಬಹುದಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಹಲವು ವೈಶಿಷ್ಟ್ಯಗಳೊಂದಿಗೆ ರೂಪುಗೊಂಡಿರುವ ಈ ವಾಚ್‌ 2.04 ಇಂಚಿನ ಅಮೋಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. 2.5ಡಿ ಕರ್ವ್ಡ್ ಗ್ಲಾಸ್, 368*448 ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದ್ದು, 800 ನಿಟ್ಸ್‌ ಬ್ರೈಟ್‌ನೆಸ್‌ ಹೊಂದಿದೆ. ಕತ್ತಲೆ ಮತ್ತು ಬೆಳಕಿನಲ್ಲಿ ಪರದೆಯ ಮೇಲಿನ ಮಾಹಿತಿ ಸ್ಪಷ್ಟವಾಗಿ ಕಾಣಿಸುವಂತೆ ವಾಚ್‌ ಅನ್ನು ವಿನ್ಸಾಸಗೊಳಿಸಲಾಗಿದೆ ಎಂದು ತಿಳಿಸಿದೆ.

ಬ್ಲೂಟೂತ್ ಕರೆ ಮಾಡಲು ಅನುಕೂಲಕರವಾಗಿದ್ದು, ಧ್ವನಿ ಸ್ಪಷ್ಟತೆಗೆ ಇನ್‌ ಬಿಲ್ಟ್‌ ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದೆ. ಕರೆ ಮಾಡುವುದು ಮತ್ತು ಸ್ವೀಕರಿಸುವುದು ಎರಡು ಕೂಡ ಇದರಲ್ಲಿ ಸರಳವಾಗಿದೆ. ಅಲ್ಲದೇ ಒಮ್ಮೆ ಚಾರ್ಜ್‌ ಮಾಡಿದರೆ ಐದು ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಐಪಿ67 ತಂತ್ರಜ್ಞಾನವನ್ನು ಅಳವಡಿಸಿದ್ದು, ಇದು ನೀರಿನಿಂದ ರಕ್ಷಣೆ ಒದಗಿಸುತ್ತದೆ.

100ಕ್ಕೂ ಹೆಚ್ಚು ಸ್ಪೋರ್ಟ್ ಮೋಡ್‌ಗಳು ಮತ್ತು ಹೆಲ್ತ್ ಫೀಚರ್‌ಗಳನ್ನು ಈ ವಾಚ್‌ ಒಳಗೊಂಡಿದೆ. ಹೃದಯ ಬಡಿತವನ್ನು ಮಾನಿಟರಿಂಗ್ ಮಾಡುವ, ಹವಾಮಾನ ಮುನ್ಸೂಚನೆ, ಕ್ಯಾಮರಾ, ಕ್ಯಾಲ್ಕುಲೇಟರ್‌, ಸಂಗೀತ, ಪೋನ್‌ ಕರೆ, ಸಮಯ ಹೀಗೆ ಹಲವು ರೀತಿಯ ವೈಶಿಷ್ಯಗಳನ್ನು ಫೈರ್‌ ವಾಚ್ ಹೊಂದಿದೆ. ಈ ವಾಚ್‌ ಗೂಗಲ್‌ ಫಿಟ್‌ ಮತ್ತು ಆ್ಯಪಲ್‌ ಹೆಲ್ತ್‌ ಅಪ್ಲಿಕೇಶನ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.