ADVERTISEMENT

Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 10:15 IST
Last Updated 24 ಅಕ್ಟೋಬರ್ 2024, 10:15 IST
<div class="paragraphs"><p>ಆ್ಯಂಡ್ರಾಯ್ಡ್ 15</p></div>

ಆ್ಯಂಡ್ರಾಯ್ಡ್ 15

   

ಎಕ್ಸ್ ಚಿತ್ರ

ಬೆಂಗಳೂರು: ಗೂಗಲ್‌ನ ಆ್ಯಂಡ್ರಾಯ್ಡ್‌ 15 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗಿದ್ದು ಕಳೆದವಾರದಿಂದ ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ಗಳನ್ನು ಪಡೆಯಲಾರಂಭಿಸಿವೆ. ಸಹಜ ಎನ್ನುವಂತೆ ಗೂಗಲ್‌ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿದೆ. 

ADVERTISEMENT

ಬಳಕೆದಾರರ ಖಾಸಗಿತನ, ಕಾರ್ಯಕ್ಷಮತೆ ಹೆಚ್ಚಳ, ಬ್ಯಾಟರಿಯ ಸಮರ್ಪಕ ಬಳಕೆ, ಕ್ಯಾಮೆರಾ ಮೂಲಕ ಸೆರೆ ಹಿಡಿದ ಚಿತ್ರಗಳ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. 

ಆ್ಯಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಂ ಆಧಾರಿತ ಮೂಲ ಸಾಧನ ತಯಾರಕರಲ್ಲಿ ಪ್ರಮುಖವಾದ ಸ್ಯಾಮ್ಸಂಗ್‌, ಒನ್‌ಪ್ಲಸ್‌, ವಿವೊ, ಷವೊಮಿ, ಒಪ್ಪೊ, ನಥಿಂಗ್, ಮೊಟೊರೊಲಾ ಕಂಪನಿಗಳು ಹೊಸ ಆವೃತ್ತಿಯ ಆಪರೇಟಿಂಗ್‌ ಸಿಸ್ಟಂ ಹೊಂದಲಿವೆ ಎಂದೆನ್ನಲಾಗಿದೆ.

ಒನ್‌ ಪ್ಲಸ್‌ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯು ಈವಾರ ಹೊಸ ಆವೃತ್ತಿಯ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಆಧಾರಿತ OxygenOS 15 ಅಪ್‌ಡೇಟ್‌ಗಳನ್ನು ತನ್ನ ಪ್ರೀಮಿಯಂ ಫೋನ್‌ಗಳಿಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಹಾಗಿದ್ದರೆ ಆ್ಯಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಪಡೆಯಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಸ್ಯಾಮ್ಸಂಗ್ ಫೋನ್‌

ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌

ಗ್ಯಾಲೆಕ್ಸಿ ಎಸ್‌ ಸರಣಿ: ಗ್ಯಾಲಕ್ಸಿ ಎಸ್‌21 ಎಫ್‌ಇ 5ಜಿ, ಎಸ್‌21 5ಜಿ, ಎಸ್‌21+ 5ಜಿ, ಎಸ್‌21 ಅಲ್ಟ್ರಾ 5ಜಿ, ಗ್ಯಾಲಕ್ಸಿ ಎಸ್‌22, ಎಸ್‌22+, ಎಸ್‌22 ಅಲ್ಟ್ರಾ, ಎಸ್‌23, ಎಸ್‌23+, ಎಸ್‌23, ಗ್ಯಾಲಕ್ಸಿ ಎಸ್‌24, ಎಸ್‌24 ಪ್ಲಸ್‌ ಹಾಗೂ ಎಸ್‌24 ಅಲ್ಟ್ರಾ.

ಗ್ಯಾಲಕ್ಸಿ ಫೋಲ್ಡಬಲ್‌ ಸಾಧನ: ಗ್ಯಾಲಕ್ಸಿ ಝಡ್‌ ಫ್ಲಿಪ್ 3 5ಜಿ, ಝಡ್‌ ಫ್ಲಿಪ್‌4, ಝಡ್‌ ಫೋಲ್ಡ್‌ 3, ಗ್ಯಾಲಕ್ಸಿ ಝಡ್‌ ಫೋಲ್ಡ್‌ 4 5ಜಿ, ಝಡ್‌ ಫೋಲ್ಡ್‌5 ಹಾಗೂ ಝಡ್‌ ಫೋಲ್ಡ್‌ 6 ಈ ಸಾಧನಗಳು ಆ್ಯಂಡ್ರಾಯ್ಡ್‌ 15 ಆಧಾರಿತ OneUI 7 ಪಡೆಯಲಿವೆ.

ಗ್ಯಾಲಕ್ಸಿ ಎ ಸರಣಿ: ಗ್ಯಾಲಕ್ಸಿ ಎ23, ಎ24, ಎ25, ಎ32, ಎ33, ಎ34, ಎ35 5ಜಿ, ಎ53, ಎ55 5ಜಿ, ಗ್ಯಾಲಕ್ಸಿ ಎ73 5ಜಿ.

ಗ್ಯಾಲಕ್ಸಿ ಎ14, ಎ15 ಹಾಗೂ ನಂತರದ ಎ16 5ಜಿ ಕೂಡಾ ಆ್ಯಂಡ್ರಾಯ್ಡ್ 15 ಪಡೆಯುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಗ್ಯಾಲಕ್ಸಿ ಎಂ ಸರಣಿ: ಗ್ಯಾಲಕ್ಸಿ ಎಂ33 ಹಾಗೂ ಎಂ55 ಸರಣಿಯ ಸ್ಮಾರ್ಟ್‌ಫೋನ್‌ ಕೂಡಾ ಹೊಸ ಆಪರೇಟಿಂಗ್ ಸಿಸ್ಟಂ ಪಡೆಯಲಿದೆ.

ಗ್ಯಾಲಕ್ಸಿ ಎಫ್‌ ಸರಣಿ: ಗ್ಯಾಲಕ್ಸಿ ಎಫ್‌55, ಎಫ್‌54 ಹಾಗೂ ಎಫ್‌34 ಸರಣಿಯ ಫೋನ್‌ಗಳು

ಗ್ಯಾಲಕ್ಸಿ ಟ್ಯಾಬ್‌ ಎಸ್‌8 ಹಾಗೂ ನಂತರ ಸಾಧನಗಳು ಆ್ಯಂಡ್ರಾಯ್ಡ್‌ 15 ಆಧಾರಿತ ಒನ್‌ಯುಐ 7.0 ಅಪ್‌ಡೇಟ್ ಪಡೆಯಲಿವೆ.

ಗೂಗಲ್ ಪಿಕ್ಸೆಲ್

ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್

ಗೂಗಲ್‌ ಪಿಕ್ಸೆಲ್‌ 6, 6 ಪ್ರೊ, 6ಎ, ಪಿಕ್ಸೆಲ್‌ 7, 7 ಪ್ರೊ, 7ಎ, ಪಿಕ್ಸೆಲ್‌ ಟ್ಯಾಬ್ಲೆಟ್‌, ಪಿಕ್ಸೆಲ್ ಫೋಲ್ಡ್‌, ಪಿಕ್ಸೆಲ್‌ 8, 8 ಪ್ರಿ, 8ಎ, ಪಿಕ್ಸೆಲ್‌ 9, 9 ಪ್ರೊ, 9 ಪ್ರೊ ಎಕ್ಸ್‌ಎಲ್‌ ಹಾಗೂ ಪಿಕ್ಸೆಲ್‌ 9 ಪ್ರೊ ಫೋಲ್ಡ್‌ ಆ್ಯಂಡ್ರಾಯ್ಡ್ 15 ಪಡೆಯುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಒನ್‌ ಪ್ಲಸ್ ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 12, 12ಆರ್, ಒನ್‌ಪ್ಲಸ್‌ ಒಪನ್‌, ಒನ್‌ಪ್ಲಸ್‌ 11, 11ಆರ್‌, ಒನ್‌ಪ್ಲಸ್‌ 10 ಪ್ರೊ, 10ಟಿ, 10ಆರ್, ಒನ್‌ಪ್ಲಸ್‌ ನಾರ್ಡ್‌4, ಸಿಸಿ4, ಸಿಇ4 ಲೈಟ್‌ ಹಾಗೂ ಒನ್‌ಪ್ಲಸ್‌ ನಾರ್ಡ್‌ 3 ಸರಣಿಯ ಸ್ಮಾರ್ಟ್‌ಫೋನ್‌ಗಳು.

ನಥಿಂಗ್ ಸ್ಮಾರ್ಟ್‌ಫೋನ್‌

Nothing ಫೋನ್‌ಗಳು

ನಥಿಂಗ್‌ ಫೋನ್‌ 2, 2ಎ ಹಾಗೂ 2ಎ ಪ್ಲಸ್‌ಗಳಿಗೆ ಆ್ಯಂಡ್ರಾಯ್ಡ್‌ 15 ಆಧಾರಿತ NothingOS 3.0 ಅಪ್‌ಡೇಟ್‌ ಲಭಿಸುವುದಾಗಿ ವರದಿಯಾಗಿದೆ.

Xiaomi ಫೋನ್‌ಗಳು

ಷವೊಮಿ 13 ಹಾಗೂ 14 ಸರಣಿಯ ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ್‌ 15 ಆಧಾರಿತ ಹೈಪರ್‌ಒಎಸ್‌ ಅಪ್‌ಡೇಟ್ ಪಡೆಯಲಿವೆ.

ರೆಡ್‌ಮಿ ನೋಟ್‌ 12 ಹಾಗೂ ನೋಟ್‌ 13 ಸರಣಿಯ ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ್‌ನ ಹೊಸ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಪಡೆಯಲಿವೆ. ಆದರೆ ಉಳಿದ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ಗಳು ಆ್ಯಂಡ್ರಾಯ್ಡ್ 15ಕ್ಕೆ ಸೂಕ್ತವಾಗದ ಕಾರಣ, ಕೆಲವೊಂದು ಸೌಕರ್ಯಗಳು ಲಭಿಸುವುದು ಅನುಮಾನ ಎಂದೆನ್ನಲಾಗಿದೆ.

ವಿವೊ ಸ್ಮಾರ್ಟ್‌ಫೋನ್‌

VIVO ಎಕ್ಸ್‌100 ಸರಣಿ, ವಿವೊ ಎಕ್ಸ್ ಫೋಲ್ಡ್‌ 3 ಪ್ರೊ ಹಾಗೂ ವಿ40 ಸರಣಿ

ಒಪ್ಪೊ ಸ್ಮಾರ್ಟ್‌ಫೋನ್‌

OPPO ಫೈಂಡ್‌ ಎನ್‌3 ಫ್ಲಿಪ್‌, ಎಫ್‌27 ಸರಣಿ, ರೆನೊ 12 ಸರಣಿ, ಕೆ12 ಸರಣಿ ಹಾಗೂ ಇತರೆ.

iQOO ಸ್ಮಾರ್ಟ್‌ಫೋನ್‌

ಐಕ್ಯೂ 12 ಸ್ಮಾರ್ಟ್‌ಫೋನ್‌ಗೆ ಆ್ಯಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ ಸಿಗುವುದು ಖಚಿತವಾಗಿದೆ. ಐಕ್ಯೂ ಸ್ಮಾರ್ಟ್‌ಫೋನ್‌ನ ಝಡ್‌9 ಸರಣಿಯ ಫೋನ್‌ಗಳಿಗೆ ಹೊಸ ಆವೃತ್ತಿಯ ಫನ್‌ಟಚ್‌ 15 ಒಎಸ್‌ ಲಭಿಸಲಿದೆ.

ಮೊಟೊರೊಲಾ ಸ್ಮಾರ್ಟ್‌ಫೋನ್‌

ಮೊಟೊರೊಲಾ ರೇಝರ್‌ 40 ಮತ್ತು ರೇಝರ್‌ 50 ಸರಣಿಯ ಫೋಲ್ಡಬಲ್‌ ಫೋನ್‌ಗಳು, ಮೊಟೊರೊಲಾ ಎಡ್ಜ್‌ 50 ಸರಣಿಯ ಫೋನ್‌ಗಳಿಗೆ ಆ್ಯಂಡ್ರಾಯ್ಡ್‌ 15 ಆಪರೇಟಿಂಗ್ ಸಿಸ್ಟಂನ ಅಪ್‌ಡೇಟ್‌ ಸಿಗಲಿದೆ.

ಆ್ಯಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನ ಅಪ್‌ಡೇಟ್ ರಿಲೀಸ್ ಮಾಡುವ ಕುರಿತು ಇತರ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳಿಂದ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.