ADVERTISEMENT

Apple Watch Series 9, Ultra 2 ಬಿಡುಗಡೆ: ಏನಿವುಗಳ ವಿಶೇಷತೆ, ಬೆಲೆ ಎಷ್ಟು?

Apple Watch Series

ಐಎಎನ್ಎಸ್
Published 13 ಸೆಪ್ಟೆಂಬರ್ 2023, 12:43 IST
Last Updated 13 ಸೆಪ್ಟೆಂಬರ್ 2023, 12:43 IST
<div class="paragraphs"><p>ಆ್ಯಪಲ್ ವಾಚ್ ಸೀರೀಸ್ 9</p></div>

ಆ್ಯಪಲ್ ವಾಚ್ ಸೀರೀಸ್ 9

   

Apple

ಕ್ಯಾಲಿಫೋರ್ನಿಯ: ಆ್ಯಪಲ್ ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಬುಧವಾರ ಆ್ಯಪಲ್ ವಾಚ್ ಸರಣಿ 9 ಬಿಡುಗಡೆಗೊಳಿಸಿದ್ದು, ಆ್ಯಪಲ್ ವಾಚ್ ಸೀರೀಸ್ 9 ಹಾಗೂ ಆ್ಯಪಲ್ ವಾಚ್ ಎಸ್ಇ ಆವೃತ್ತಿಗಳು ಸೆಪ್ಟೆಂಬರ್ 22ರಿಂದ ಭಾರತದ ಮಾರುಕಟ್ಟೆಯಲ್ಲಿ ದೊರೆಯಲಿವೆ.

ADVERTISEMENT

ಆ್ಯಪಲ್ ವಾಚ್ ಸೀರೀಸ್ 9ರ ಬೆಲೆ ₹41,900ರಿಂದ ಆರಂಭವಾಗಲಿದ್ದರೆ, ಆ್ಯಪಲ್ ವಾಚ್ ಎಸ್ಇ ಬೆಲೆಯು ₹29,900 ರಿಂದ ಆರಂಭವಾಗುತ್ತದೆ.

ಆ್ಯಪಲ್ ವಾಚ್ 9ನೇ ಸರಣಿಯು 41mm ಹಾಗೂ 45mm ಗಾತ್ರಗಳಲ್ಲಿ, ಹೊಸದಾಗಿ ಗುಲಾಬಿ ಬಣ್ಣದ ಅಲ್ಯುಮಿನಿಯಂ ಕೇಸ್‌ನಲ್ಲಿ ಸ್ಟಾರ್‌ಲೈಟ್, ಮಿಡ್‌ನೈಟ್, ಸಿಲ್ವರ್, ಪ್ರಾಡಕ್ಟ್ ರೆಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ, ಗೋಲ್ಡ್, ಸಿಲ್ವರ್ ಮತ್ತು ಗ್ರಾಫೈಟ್ ಬಣ್ಣಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಕೇಸ್‌ಗಳೊಂದಿಗೆ ದೊರೆಯಲಿದೆ.

ಹೊಚ್ಚ ಹೊಸ ಎಸ್9 ಚಿಪ್ ಜೊತೆಗೆ ದಿನಪೂರ್ತಿ ಬಳಸಿದರೆ 18 ಗಂಟೆಗಳ ಬ್ಯಾಟರಿ ಚಾರ್ಜ್ ಬಾಳಿಕೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವಾಚ್ ಅನ್ನು ಮುಟ್ಟದೆಯೇ, ಡಬಲ್ ಟ್ಯಾಪ್‌ನಿಂದಲೇ ಆ್ಯಪಲ್ ವಾಚ್ 9 ಅನ್ನು ಒಂದೇ ಕೈಯಿಂದ ನಿಭಾಯಿಸಬಹುದು.

ಇದರೊಂದಿಗೆ, ಆ್ಯಪಲ್ ವಾಚ್ ಅಲ್ಟ್ರಾ 2 ಕೂಡ ಬಿಡುಗಡೆಯಾಗಿದ್ದು, ಇದು ಆ್ಯಪಲ್‌ನ ಅತ್ಯಂತ ಶಕ್ತಿಶಾಲಿ ಸ್ಮಾರ್ಚ್ ವಾಚ್. ಸಾಮಾನ್ಯ ಬಳಕೆಯಲ್ಲಿ 36 ಗಂಟೆಗಳ ಬ್ಯಾಟರಿ ಚಾರ್ಜ್ ಮತ್ತು ಕಡಿಮೆ ವಿದ್ಯುತ್ ಬಳಕೆಯ ಮೋಡ್ ಬಳಸಿದರೆ 72 ಗಂಟೆಗಳ ಬಾಳಿಕೆ ಬರಲಿದೆ.

ಆ್ಯಪಲ್ ವಾಚ್ ಅಲ್ಟ್ರಾ 2 ಬೆಲೆ ₹89,900 ಆಗಿದ್ದು, ಸೆಪ್ಟೆಂಬರ್ 22ರಿಂದ ಲಭ್ಯವಾಗಲಿದೆ.

ಇಷ್ಟೇ ಅಲ್ಲದೆ, ಮ್ಯಾಗ್‌ಸೇಫ್ ಚಾರ್ಜಿಂಗ್ ಇರುವ ಏರ್‌ಪಾಡ್ಸ್ ಪ್ರೊ (2ನೇ ಪೀಳಿಗೆ) - ಇಯರ್ ಪಾಡ್‌ಗಳನ್ನೂ ಆ್ಯಪಲ್ ಘೋಷಿಸಿದೆ. ಇದಕ್ಕೆ ಯುಎಸ್‌ಬಿ ಸಿ ಮಾದರಿಯ ಚಾರ್ಜಿಂಗ್ ಒದಗಿಸಲಾಗಿರುವುದು ವಿಶೇಷ. ಇದರ ಬೆಲೆ ‌₹24,900.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.