ಬೀಜಿಂಗ್: ಆ್ಯಪಲ್ ಕಂಪನಿ ಬಿಡುಗಡೆ ಮಾಡಿರುವ ಐಫೋನ್ 13 ಸರಣಿಯ ಮಾರಾಟ ಚೀನಾದಲ್ಲಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪೈಕಿ ಚೀನಾದಲ್ಲಿ ಶೇ 50ಕ್ಕೂ ಹೆಚ್ಚಿನ ಪಾಲನ್ನು ಆ್ಯಪಲ್ ಐಫೋನ್ ಹೊಂದಿದೆ.
ಹುವಾಯ್ ಕಂಪನಿ ಮೇಲಿನ ನಿರ್ಬಂಧ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹಿನ್ನಡೆ ಬಳಿಕ ಆ್ಯಪಲ್, ಹೆಚ್ಚಿನ ಪಾಲು ಪಡೆದುಕೊಂಡಿದೆ.
ವಿವೊ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಂತರದಲ್ಲಿ ಉಳಿದ ಬ್ರ್ಯಾಂಡ್‌ಗಳಿವೆ.
ಆ್ಯಪಲ್, ಮುಂದಿನ ತಿಂಗಳು ನೂತನ ಐಫೋನ್ 14 ಸರಣಿ ಬಿಡುಗಡೆಗೆ ಮುಂದಾಗಿದೆ.
2019ರಲ್ಲಿ ಅಮೆರಿಕ, ಹುವಾಯ್ ಕಂಪನಿ ಮೇಲೆ ನಿರ್ಬಂಧ ವಿಧಿಸಿದ ಬಳಿಕ, ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.