ADVERTISEMENT

‘ಆ್ಯಪಲ್‌ ಐಫೋನ್ 9’ರ ಎಲ್‌ಸಿಡಿ ಪರದೆಯ ಚಿತ್ರ ಸೋರಿಕೆ

6.1 ಇಂಚಿನ ಎಲ್‌ಸಿಡಿ ಪರದೆಯುಳ್ಳ ಫೋನ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 10:33 IST
Last Updated 6 ಆಗಸ್ಟ್ 2018, 10:33 IST
ಸ್ಲ್ಯಾಶ್‌ಲೀಕ್ಸ್‌ನಲ್ಲಿ ಪ್ರಕಟವಾದ 6.1 ಇಂಚಿನ ಎಲ್‌ಸಿಡಿ ಪರದೆಯ ‘ಆ್ಯಪಲ್ ಐಫೋನ್ 9’ರ ಚಿತ್ರ
ಸ್ಲ್ಯಾಶ್‌ಲೀಕ್ಸ್‌ನಲ್ಲಿ ಪ್ರಕಟವಾದ 6.1 ಇಂಚಿನ ಎಲ್‌ಸಿಡಿ ಪರದೆಯ ‘ಆ್ಯಪಲ್ ಐಫೋನ್ 9’ರ ಚಿತ್ರ    

ನವದೆಹಲಿ: ‘ಆ್ಯಪಲ್ ಐಫೋನ್ 9’ರ6.1 ಇಂಚಿನ ಎಲ್‌ಸಿಡಿ ಪರದೆಯ ಚಿತ್ರ ಮತ್ತೊಮ್ಮೆ ಸೋರಿಕೆಯಾಗಿದೆ. ಸ್ಲ್ಯಾಶ್‌ಲೀಕ್ಸ್‌ನಲ್ಲಿ ಪ್ರಕಟವಾದ ಚಿತ್ರದಲ್ಲಿ, ‘ಐಫೋನ್ 9’ ಒಂದೇ ಹಿಂಬದಿ ಕ್ಯಾಮರಾ ಒಳಗೊಂಡಿರುವುದು ಕಂಡುಬಂದಿದೆ. ಕೆಲವು ವರದಿಗಳ ಪ್ರಕಾರ, ‘ಐಫೋನ್ 9’ ಹಿಂಬದಿಯಲ್ಲಿಯೂ ಗಾಜಿನ ಆವರಣವನ್ನು ಒಳಗೊಂಡಿದೆ ಎನ್ನಲಾಗಿದೆ.

ಸ್ಲ್ಯಾಶ್‌ಲೀಕ್ಸ್‌ನಲ್ಲಿ ಹೇಳಿರುವ ಪ್ರಕಾರ, ಇತರ ಎರಡು ‘ಐಫೋನ್ X’ ಮಾದರಿಗಳಿಗಿಂತ ಈ ಫೋನ್ ಕಡಿಮೆ ದರದ್ದಾಗಿರಲಿದೆ. ಆದರೆ, ಇತರ ಎರಡು ಮಾದರಿಗಳಂತೆಯೇ ಫುಲ್‌ ಸ್ಕ್ರೀನ್ ಡಿಸ್ಪ್ಲೇ ಹೊಂದಿರಲಿದ್ದು, ತೆಳುವಾದ ಅಂಚಿನಿಂದ ಕೂಡಿರಲಿದೆ.

ಸೋರಿಕೆಯಾದ ಚಿತ್ರದಲ್ಲಿ ಕಂಡಂತೆ, ‘ಐಫೋನ್ 9’ ಒಂದೇ ಹಿಂಬದಿ ಕ್ಯಾಮರಾ ಒಳಗೊಂಡಿದೆ. ಹೀಗಾಗಿ 4.7 ಇಂಚು ಪರದೆಯ ‘ಐಫೋನ್ 8’ಕ್ಕೆ ಪರ್ಯಾಯವಾಗಿ ಇದು ಮಾರುಕಟ್ಟೆಗೆ ಬರಲಿದೆ. ‘ಐಫೋನ್ 8 ಪ್ಲಸ್’ ಮತ್ತು ‘ಐಫೋನ್ X’ನಲ್ಲಿಯೂ ಆ್ಯಪಲ್ ಡ್ಯುಯೆಲ್ ಕ್ಯಾಮರಾ ಅಳವಡಿಸಿರಲಿಲ್ಲ.

ವರದಿಗಳ ಪ್ರಕಾರ, ‘ಐಫೋನ್‌ X’ನ ಎರಡು ದುಬಾರಿ ಮಾದರಿಗಳು ಡ್ಯುಯೆಲ್ ಕ್ಯಾಮರಾವನ್ನು ಒಳಗೊಂಡಿವೆ ಎನ್ನಲಾಗಿದೆ. ‘ಐಫೋನ್‌ X’ 2017ರ ಮಾದರಿಯಂತೆಯೇ 5.8 ಇಂಚಿನ ಪರದೆ ಹೊಂದಿರಲಿದೆ. 2018ರ ‘ಐಫೋನ್ X ಪ್ಲಸ್' 6.5 ಇಂಚಿನ ಪರದೆ ಹೊಂದಿರಲಿದೆ. ಇವೆರಡರ ಡಿಸ್‌ಪ್ಲೇಯಲ್ಲೂ ಒಎಲ್‌ಇಡಿ (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಿಯೋಡ್ಸ್)ತಂತ್ರಜ್ಞಾನ ಬಳಸಲಾಗಿದ್ದು, ದುಬಾರಿಯಾಗಿರಲಿವೆ. ‘ಐಫೋನ್ X ಪ್ಲಸ್'ಗೆ 900ರಿಂದ 1,000 ಡಾಲರ್ ಬೆಲೆ ಅಂದಾಜಿಸಲಾಗಿದೆ.

ಆ್ಯಪಲ್ 2018ರ ಸರಣಿಯಲ್ಲಿ ಡ್ಯುಯೆಲ್ ಸಿಮ್ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯೂ ಇದೆ. ಈ ಹಿಂದಿನ ವರದಿಗಳ ಪ್ರಕಾರ, 6.1 ಇಂಚಿನ ಎಲ್‌ಸಿಡಿ ಪರದೆಯ ‘ಐಫೋನ್ 9’ ಮತ್ತು ‘ಐಫೋನ್ X ಪ್ಲಸ್’ ಡ್ಯುಯೆಲ್ ಸಿಮ್ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಆ್ಯಪಲ್, ಡ್ಯುಯೆಲ್ ಸಿಮ್ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.