ಬೆಂಗಳೂರು: ಟೆಕ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ.
ಚೀನಾದಲ್ಲಿನ ಬಹುಪಾಲು ಉತ್ಪಾದನಾ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗಳಿಗೆ ಸ್ಥಳಾಂತರಿಸಲು ಆ್ಯಪಲ್ ಕಂಪನಿ ಮುಂದಾಗಿದೆ.
ಚೀನಾದಲ್ಲಿ ಕೋವಿಡ್ ಲಾಕ್‌ಡೌನ್ ಮತ್ತು ಸರ್ಕಾರದ ವಿವಿಧ ನಿರ್ಬಂಧಗಳು ಹಾಗೂ, ಝೆಂಗ್‌ಹೌ ಉತ್ಪಾದನಾ ಘಟಕದಲ್ಲಿ ನಡೆದ ಕಾರ್ಮಿಕರ ನಡುವಣ ಗಲಭೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಪನಿ ಈ ನಿರ್ಧಾರಕ್ಕೆ ಮುಂದಾಗಿದೆ.
ಐಫೋನ್ ಫ್ಯಾಕ್ಟರಿಯಲ್ಲಿ ಉತ್ಪಾದನೆ ಸ್ಥಗಿತಗೊಂಡ ಪರಿಣಾಮ, ಜಾಗತಿಕ ಪೂರೈಕೆ ಸರಪಣಿಗೆ ಸಮಸ್ಯೆ ಉಂಟಾಗಿದೆ. ಅಲ್ಲದೆ, ಒಂದೇ ಘಟಕದ ಮೇಲಿನ ಅವಲಂಬನೆಯಿಂದ ಆ್ಯಪಲ್ ಸಮಸ್ಯೆಗೆ ಸಿಲುಕಿದೆ.
ಮುಂದೆ, ಅಂತಹ ಸಮಸ್ಯೆ ಎದುರಾಗದಿರಲು ಆ್ಯಪಲ್ ಆಡಳಿತ ಮಂಡಳಿ, ಐಫೋನ್ ತಯಾರಿಸುವ ಉದ್ಯಮ ಪಾಲುದಾರ ಕಂಪನಿಗಳ ಜತೆ ಮಾತುಕತೆಗೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.