ನವದೆಹಲಿ: ಆ್ಯಪಲ್ ಹೊಸ ಸರಣಿಯ ಐಫೋನ್‌ಗಳಲ್ಲಿ ಬಳಸುವ ಕ್ಯಾಮೆರಾದಲ್ಲಿ ಗರಿಷ್ಠ ಬದಲಾವಣೆ ಮಾಡಲು ಮುಂದಾಗಿದೆ.
ಐಫೋನ್ 13 ಸರಣಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜತೆಗೆ ಈ ವರ್ಷ ಐಪೋನ್ 14 ಸರಣಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಹಾಗಿರುವಾಗಲೇ, ಐಫೋನ್ 15 ಸರಣಿ ಕುರಿತು ಗ್ಯಾಜೆಟ್ ಮಾರುಕಟ್ಟೆಯಲ್ಲಿ ಚರ್ಚೆ ಆರಂಭವಾಗಿದೆ.
ಮಾರುಕಟ್ಟೆ ವಿಶ್ಲೇಷಕ ಜೆಫ್ ಪು ಪ್ರಕಾರ, 9 ಟು 5 ಮ್ಯಾಕ್ ವರದಿ ಮಾಡಿರುವಂತೆ, ಆ್ಯಪಲ್ 15 ಪ್ರೊ ಸರಣಿಯಲ್ಲಿ 5x ಟೆಲಿಫೋಟೊ ಲೆನ್ಸ್ ಕ್ಯಾಮೆರಾ ಇರಲಿದೆ.
2023ರಲ್ಲಿ ಐಫೋನ್ 15 ಸರಣಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಐಫೋನ್ 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್‌ನಲ್ಲಿ ಟೆಲಿಫೋಟೊ ಪೆರಿಸ್ಕೋಪ್ ಲೆನ್ಸ್ ಬಳಸುವ ಕುರಿತಂತೆ ಲಾಂಟೆ ಆಪ್ಟಿಕ್ಸ್ ಅಭಿವೃದ್ಧಿಪಡಿಸಿರುವ ಲೆನ್ಸ್‌ಗಳನ್ನು ಆ್ಯಪಲ್ ಪರಿಶೀಲನೆ ನಡೆಸಲಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಟೆಲಿಫೋಟೊ ಲೆನ್ಸ್ ಬಳಕೆಯಾಗಿದ್ದರೂ, ಆ್ಯಪಲ್ ವಿವಿಧ ಹಂತದ ಪರಿಶೀಲನೆಯ ಬಳಿಕವಷ್ಟೇ ಹೊಸ ಸರಣಿಯ ಐಫೋನ್‌ನಲ್ಲಿ ಪರಿಚಯಿಸಲು ಮುಂದಾಗಿದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.