ಬೆಂಗಳೂರು: ಸೆಪ್ಟೆಂಬರ್‌ಗೆ ಕೊನೆಯಾದ ಮೂರನೇ ತ್ರೈಮಾಸಿಕ ವರದಿಯನ್ನು ಆ್ಯಪಲ್ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಗರಿಷ್ಠ ಪ್ರಮಾಣದ ಗಳಿಕೆ ದಾಖಲಿಸಿರುವುದಾಗಿ ಹೇಳಿದೆ.
ಜಾಗತಿಕವಾಗಿ ಆ್ಯಪಲ್, ಕಳೆದ ತ್ರೈಮಾಸಿಕದಲ್ಲಿ 90.1 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 8ರಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಐಫೋನ್ ಮಾರಾಟ ಪ್ರಮಾಣದಲ್ಲಿದಾಖಲೆ ಏರಿಕೆಯಾಗಿದ್ದು, ಅತ್ಯಧಿಕ ಮೊತ್ತವನ್ನು ಗಳಿಸಿರುವುದಾಗಿ ಆ್ಯಪಲ್ ತಿಳಿಸಿದೆ.
ಭಾರತ ಮಾತ್ರವಲ್ಲದೆ, ಇಂಡೋನೇಷ್ಯಾ, ಮೆಕ್ಸಿಕೊ ಮತ್ತುವಿಯೆಟ್ನಾಂಗಳಲ್ಲೂ ಆ್ಯಪಲ್ ಆದಾಯ ಏರಿಕೆಯಾಗಿದೆ.
ಡಾಲರ್ ಮೌಲ್ಯವರ್ಧನೆ ಜತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಆ್ಯಪಲ್ ಉತ್ಪನ್ನ ಪೂರೈಕೆ ಮಾಡಿರುವುದು ಗಳಿಕೆ ಹೆಚ್ಚಲು ಕಾರಣ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.