ನವದೆಹಲಿ: ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿ, ಅಮೆರಿಕ ಮೂಲದ ಆ್ಯಪಲ್ ಹೊಸದಾಗಿ ಬಿಡುಗಡೆ ಮಾಡಿರುವ ಏರ್‌ಪಾಡ್ಸ್ ಅನ್ನು ಭಾರತದಲ್ಲೇ ತಯಾರಿಸಲು ಕಂಪನಿ ಮುಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ವಿವರಣೆ ನೀಡಿದ್ದು, ನೂತನ ಏರ್‌ಪಾಡ್ಸ್ ಅನ್ನು ದೇಶದಲ್ಲೇ ತಯಾರಿಸಲು ಆ್ಯಪಲ್ ಉತ್ಸುಕವಾಗಿದೆ ಎಂದಿದೆ.
ಈ ಕುರಿತು ಸಿಎನ್‌ಬಿಸಿ ಟಿವಿ18 ವರದಿ ಮಾಡಿದ್ದು, ಕೇಂದ್ರ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿದೆ.
ಆ್ಯಪಲ್ ಐಫೋನ್ 14 ಅನ್ನು ಚೆನ್ನೈನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ಡಿಸೆಂಬರ್ 2022ರ ವೇಳೆಗೆ ಆ್ಯಪಲ್ ಉತ್ಪಾದಿಸಲಿದೆ. ಅದರ ಜತೆಗೇ, ನೂತನ ಏರ್‌ಪಾಡ್ಸ್ ಕೂಡ ಭಾರತದಲ್ಲೇ ತಯಾರಾಗಲಿದೆ.
ಆದರೆ ಈ ಕುರಿತು ಆ್ಯಪಲ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.