ಬೆಂಗಳೂರು: ಅತ್ಯಾಧುನಿಕ ಡಿಸ್‌ಪ್ಲೇ ತಂತ್ರಜ್ಞಾನ ಸಾಧನಗಳಿಗೆ ಹೆಸರುವಾಸಿಯಾಗಿರುವ ಬೆಂಕ್ (BenQ), V5000i ಎಂಬ ಹೊಚ್ಚ ಹೊಸ ಪ್ರೊಜೆಕ್ಟರನ್ನು ಬಿಡುಗಡೆ ಮಾಡಿದೆ. ಇದು 4ಕೆ ಆರ್‌ಜಿಬಿ ಲೇಸರ್ ಟಿವಿ ಪ್ರೊಜೆಕ್ಟರ್ ಆಗಿದ್ದು, ಮನೆಯೊಳಗೆ ಮನರಂಜನಾ ಅನುಭವಕ್ಕೆ ಹೊಸ ಮೆರುಗು ನೀಡಲಿದೆ. ಅಪ್ರತಿಮವಾಗಿ ಬಣ್ಣದ ನಿಖರತೆ, ಅತ್ಯುತ್ತಮ ಆಡಿಯೊ ಗುಣಮಟ್ಟದೊಂದಿಗೆ ಮನೆಯಲ್ಲೇ ಸಿನಿಮಾ ವೀಕ್ಷಣೆಯ ಅನುಭವವನ್ನು ಮೇಲ್ದರ್ಜೆಗೇರಿಸಲಿದೆ.
ದೊಡ್ಡ ಪರದೆಯ ಟಿವಿಗಳಿಗೆ ಇದು ಪರ್ಯಾಯವೆಂಬಂತಿದ್ದು, ಗೂಗಲ್‌ನ ಆಂಡ್ರಾಯ್ಡ್ ಟಿವಿ ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ವೀಡಿಯೊ ಸ್ಟ್ರೀಮಿಂಗ್ ವೇದಿಕೆಗಳ ಬಳಕೆಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ವೈಫೈ, ಬ್ಲೂಟೂತ್, ವಾಯ್ಸ್ ಅಸಿಸ್ಟೆಂಟ್, ಮಿರರ್ ಕಾಸ್ಟಿಂಗ್ ತಂತ್ರಜ್ಞಾನಗಳನ್ನು ಬೆಂಬಲಿಸುವ ಈ ಪ್ರೊಜೆಕ್ಟರ್, ಆರ್‌ಜಿಬಿ ಬಣ್ಣಗಳ ಲೇಸರ್ ಟಿವಿ ತಂತ್ರಜ್ಞಾನವನ್ನು ಒಳಗೊಂಡಿದೆ. ಡ್ಯುಯಲ್ 5W ಟ್ವೀಟರ್‌ಗಳು, ಡ್ಯುಯಲ್ 15W ವೂಫರ್‌ಗಳನ್ನು ಹೊಂದಿರುವ ಈ ಪ್ರೊಜೆಕ್ಟರ್‌ನಲ್ಲಿ ಧ್ವನಿಯ ಗುಣಮಟ್ಟ ಉತ್ತಮವಾಗಿದ್ದು, ಶಕ್ತಿಯುತ ಬೇಸ್‌ನೊಂದಿಗೆ ಸಿನಿಮಾಗಳ ದೃಕ್-ಶ್ರವಣ ವ್ಯವಸ್ಥೆಗೆ ಪೂರಕವಾಗಿದೆ.
V5000i ಲೇಸರ್ ಟಿವಿ ಪ್ರೊಜೆಕ್ಟರ್ ಮೂಲಕ ಸರಿಸಾಟಿಯಿಲ್ಲದ ಪ್ರೊಜೆಕ್ಟರನ್ನು ಗ್ರಾಹಕಕೇಂದ್ರಿತವಾಗಿ ರೂಪಿಸಿದ್ದು, ಗೃಹ ಮನರಂಜನಾ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಮೈಲಿಗಲ್ಲು ಎಂದು ಬೆಂಕ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಸಿಂಗ್ ಹೇಳಿದ್ದಾರೆ.
ಬೆಂಕ್ V5000i ಲೇಸರ್ ಟಿವಿ ಪ್ರೊಜೆಕ್ಟರ್‌ನಲ್ಲಿ ನೈಸರ್ಗಿಕ ಬಣ್ಣಗಳೊಂದಿಗೆ ಚಿತ್ರಗಳನ್ನು ಆಸ್ವಾದಿಸಬಹುದು. 4ಕೆ ಅಲ್ಟ್ರಾ ಎಚ್‌ಡಿ ರೆಸೊಲ್ಯುಶನ್‌ನೊಂದಿಗೆ ಉತ್ತಮ ಗುಣಮಟ್ಟದ ಚಿತ್ರಗಳ ವೀಕ್ಷಣೆ ಸಾಧ್ಯ. 40 ವ್ಯಾಟ್ ಸ್ಪೀಕರ್‌ಗಳೊಂದಿಗೆ ಅಂತರ್-ನಿರ್ಮಿತ ಹೈಫೈ ಆಡಿಯೊ ಸಿಸ್ಟಂ ಇರುವ ಈ ಪ್ರೊಜೆಕ್ಟರ್ ಅನ್ನು ಅಳವಡಿಸುವುದು ಕೂಡ ಸುಲಭ ಎಂದು ಕಂಪನಿ ಹೇಳಿಕೊಂಡಿದೆ. ಇದರ ಗರಿಷ್ಠ ಮಾರಾಟ ಬೆಲೆ ₹5,49,000 ಆಗಿದ್ದು, ಎಲ್ಲ ಪ್ರಮುಖ ರೀಟೇಲ್ ಗೃಹ ಮನರಂಜನಾ ಪಾಲುದಾರರಲ್ಲಿ, ಬೆಂಕ್ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.