ADVERTISEMENT

ಕೇಂದ್ರ ಬಜೆಟ್‌ ಪರಿಣಾಮ: ಭಾರತದಲ್ಲಿ ಐಫೋನ್‌ ಬೆಲೆ ಹೆಚ್ಚಳ, ಇಂದಿನಿಂದಲೇ ಹೊಸ ದರ

ಏಜೆನ್ಸೀಸ್
Published 2 ಮಾರ್ಚ್ 2020, 7:35 IST
Last Updated 2 ಮಾರ್ಚ್ 2020, 7:35 IST
   
""

ಬೆಂಗಳೂರು: 2020–21ನೇ ಕೇಂದ್ರ ಬಜೆಟ್‌ನಲ್ಲಿ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಿಸಲಾಗಿದ್ದು, ಅಮೆರಿಕದ ಆ್ಯಪಲ್‌ ಕಂಪನಿ ಭಾರತದಲ್ಲಿ ಐಫೋನ್‌ ಬೆಲೆ ಹೆಚ್ಚಳ ಮಾಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಭಾಷಣದಲ್ಲಿ ಬೇಸಿಕ್‌ ಕಸ್ಟಮ್ಸ್‌ ಡ್ಯೂಟಿ (ಬಿಸಿಡಿ) ದರ ಏರಿಕೆ ಹಾಗೂ ಬಿಸಿಡಿ ವಿನಾಯಿತಿ ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಐಫೋನ್‌ನ ಕೆಲವು ಮಾದರಿಗಳ ಬೆಲೆ ಶೇ 2ರಷ್ಟು ಏರಿಕೆಯಾಗಿದೆ.

ಇದರಿಂದಾಗಿ ಐಫೋನ್‌ 11 ಪ್ರೋ ಮತ್ತು ಐಫೋನ್‌ 11 ಪ್ರೋ ಮ್ಯಾಕ್ಸ್‌ ಬೆಲೆ ₹1,300 ಹೆಚ್ಚಳವಾಗಿದೆ. ₹1,09,900 ಇದ್ದ ಐಫೋನ್‌ 11 ಪ್ರೋ ಮ್ಯಾಕ್ಸ್‌ 64ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ ಬೆಲೆ ಈಗ ₹1,11,200 ಆಗಿದೆ. 256ಜಿಬಿ ಫೋನ್‌ಗೆ ₹1,25,200 ಹಾಗೂ 512ಜಿಬಿ ಫೋನ್‌ಗೆ ₹1,43,200 ಆಗಿದೆ.

ADVERTISEMENT

1 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದ 64ಜಿಬಿ ಐಫೋನ್‌ 11 ಪ್ರೋ ಫೋನ್‌ ಈಗ ₹1,01,200 ಆಗಿದೆ. 256ಜಿಬಿ ಫೋನ್‌ ಬೆಲೆ ₹1,13,900 ಮತ್ತು 512ಜಿಬಿ ಫೋನ್‌ ಬೆಲೆ 1,31,900 ಆಗಿದೆ. ಬದಲಾಗಿರುವ ಬೆಲೆ 2020ರ ಮಾರ್ಚ್‌ 2ರಿಂದಲೇ ಅನ್ವಯವಾಗುತ್ತಿದೆ.

'ಐಫೋನ್‌ 11' ಮಾದರಿ ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಲೆ ₹64,900ರಿಂದ ₹79,900 ಇದೆ. ಐಫೋನ್‌ 8 ಮಾದರಿಯ ಫೋನ್‌ ಆರಂಭಿಕ ಬೆಲೆ ₹40,500, ಐಫೋನ್‌ 8ಪ್ಲಸ್‌ಗೆ ₹50,600 ಇದೆ. ಐಫೋನ್‌ 7 ಮತ್ತು ಐಫೋನ್‌ XR, ಮ್ಯಾಕ್‌ಬುಕ್‌, ಐಪ್ಯಾಡ್‌ಗಳ ಬೆಲೆ ಪರಿಷ್ಕೃತಗೊಂಡಿಲ್ಲ.

ಇದೇ ವರ್ಷ ಆ್ಯಪಲ್‌ ಭಾರತದಲ್ಲಿ ಆನ್‌ಲೈನ್‌ ಸ್ಟೋರ್‌ ಪ್ರಾರಂಭಿಸಲು ಸಜ್ಜಾಗಿದೆ. 2021ರಲ್ಲಿ ಅಧಿಕೃತ ಮಳಿಗೆಗಳನ್ನು ತೆರೆಯುವುದಾಗಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.