ನವದೆಹಲಿ: ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ಹವಾ ಸೃಷ್ಟಿಸಿರುವ ‘ಓಪನ್ ಎಐ’ನ ChatGPT ಮುಂದಿನ ವಾರ ಆ್ಯಂಡ್ರಾಯ್ಡ್ ಡಿವೈಸ್‌ಗಳಿಗೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.
ChatGPT ಅಭಿವೃದ್ಧಿಪಡಿರುವ ಓಪನ್ ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಈ ವಿಚಾರವನ್ನು ಶುಕ್ರವಾರ ತಿಳಿಸಿದ್ದಾರೆ.
ಈಗಾಗಲೇ ಆ್ಯಪಲ್ ಕಂಪನಿಯ ಐಒಎಸ್ ಡಿವೈಸ್‌ಗಳಲ್ಲಿ ChatGPT ಬಂದು ಐದು ತಿಂಗಳು ಗತಿಸಿದೆ. ಈಗ ಆ್ಯಂಡ್ರಾಯ್ಡ್‌ನಲ್ಲಿ ಬಿಡುಗಡೆಗೊಳ್ಳಲಿರುವ ChatGPT ಹಾಗೂ ಐಒಎಸ್ ChatGPT ಹೆಚ್ಚುಕಡಿಮೆ ಹೋಲಿಕೆ ಇವೆ ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ ಬಳಕೆದಾರರು ಸಂಭಾಷಣೆಗಳನ್ನು ಹಾಗೂ ಆದ್ಯತೆಗಳನ್ನು ಸಿಂಕ್ ಮಾಡಬಹುದಾಗಿದೆ. ಆ್ಯಂಡ್ರಾಯ್ಡ್‌ನಲ್ಲಿ ಚಾಟ್‌ಜಿಪಿಟಿ ಅಳವಡಿಸಿದರೂ ಮೊದಲಿಗೆ ಅದು ಅಮೆರಿಕನ್ನರಿಗೆ ಮಾತ್ರ ಲಭ್ಯವಾಗಲಿದೆ. ಆನಂತರವೇ ಇತರ ದೇಶದ ಬಳಕೆದಾರರಿಗೆ ಸಿಗಲಿದೆ. ಆದರೆ ಅದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ
ಆರಂಭಿಕ ದಿನಗಳಿಗಿಂತ ಸದ್ಯ ಐಒಎಸ್‌ನಲ್ಲಿ ಬಳಕೆಯಲ್ಲಿರುವ ChatGPT ಸಾಕಷ್ಟು ಸುಧಾರಣೆ ಕಂಡಿದೆ ಎಂದು ಆಲ್ಟ್‌ಮನ್ ಹೇಳಿದ್ದಾರೆ.
ChatGPT ಒಂದು ಕೃತಕ ಬುದ್ಧಿಮತ್ತೆಯ ಕಂಪ್ಯೂಟರ್ ಪ್ರೋಗ್ರಾಮ್. ಮಾನವನ ಆದ್ಯತೆಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.