ಬೆಂಗಳೂರು: ಸ್ಮಾರ್ಟ್ ವಾಚ್ ತಯಾರಕ ಕಂಪನಿ ಕ್ರಾಸ್‌ಬೀಟ್ಸ್ ತನ್ನ ಹೊಸ ಮಾದರಿಯ ‘ಇಗ್ನೈಟ್ ಹಸಲ್‘ (Ignite Hustle) ವಾಚ್ ಅನ್ನು ಪರಿಚಯಿಸಿದೆ.
2.01 ಇಂಚಿನ ಡಿಸ್ಪ್‌ಲೇ ಇದ್ದು, ಶೇ 99 ಎಡ್ಜ್ ಟು ಎಡ್ಜ್ ಸ್ಕ್ರೀನ್‌ನಿಂದಾಗಿ ಉತ್ತಮ ವೀಕ್ಷಣೆ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
ಕ್ಲೀಯರ್ ಕಾಮ್‌ನೊಂದಿಗೆ ಇರುವ ಸಿಂಗಲ್‌ಚಿಪ್ ಬ್ಲ್ಯೂಟೂಥ್ ಕಾಲಿಂಗ್ ವ್ಯವಸ್ಥೆ ಇದ್ದು, ಅಡಚಣೆ ರಹಿತ ಕಾಲಿಂಗ್ ಅನುಭವ ಪಡೆಯಬಹುದಾಗಿದೆ. ಸಿರಿ ಹಾಗೂ ಒಕೆ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಕೂಡ ಇದೆ.
ಫಿಟ್ನೆಸ್ ಫ್ರೀಕ್‌ಗಳಿಗೆ ಇದು ಉತ್ತಮ ವಾಚ್ ಆಗಿದ್ದು, 125 ಚಟುವಟಿಕೆಗಳು ಹಾಗೂ ಕೃತಕ ಬುದ್ಧಿಮತ್ತೆ ಟ್ರಾಕರ್ ಇದೆ. 230mAh ಸಾಮರ್ಥ್ಯದ ಬ್ಯಾಟರಿ ಇರುವುದರಿಂದ ಒಂದು ಬಾರಿಗೆ ಚಾರ್ಜ್ ಮಾಡಿದರೆ 8–15 ದಿನ ಚಾರ್ಜ್ ನಿಲ್ಲಲಿದೆ. IP67 ವಾಟರ್ ರೆಸಿಸ್ಟೆಂಟ್ ತಂತ್ರಜ್ಞಾನ ಇರುವುದರಿಂದ ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿ ನಿರಂತರ ಬಳಕೆಯನ್ನು ಖಾತ್ರಿಗೊಳಿಸುತ್ತದೆ.
5.3 ಬ್ಲ್ಯೂಟೂಥ್ ಇರುವುದರಿಂದ ಮೊಬೈಲ್ ಹಾಗೂ ಇನ್ನಿತರ ಡಿವೈಸ್‌ಗಳಿಗೆ ಸರಳವಾಗಿ ಕನೆಕ್ಟ್ ಮಾಡಬಹುದಾಗಿದೆ.
ಕಪ್ಪು, ಬೆಳ್ಳಿ ಹಾಗೂ ನೀಲಿ ಬಣ್ಣಗಳಲ್ಲಿ ವಾಚ್ ಲಭ್ಯವಿದೆ. ₹1799 ದರ ನಿಗದಿ ಪಡಿಸಲಾಗಿದೆ. ಅಮೆಜಾನ್ ಹಾಗೂ ಕ್ರಾಸ್‌ಬೀಟ್ಸ್ ವೆಬ್‌ಸೈಟ್‌ನಿಂದ ಖರೀದಿ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.