ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ಲೋಕದ ಪ್ರಮುಖ ಸಂಸ್ಥೆ ಆ್ಯಪಲ್, ಗ್ಯಾಜೆಟ್ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದ್ದ ಐಪೋನ್ 14 ಸರಣಿಯಲ್ಲಿನ ಐಪೋನ್ 14 ಪ್ರೊ ಮಾದರಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ.
ಹೀಗಾಗಿ ಐಫೋನ್ 14 ಬದಲಿಗೆ ಐಪೋನ್ 14 ಪ್ರೊ ಮಾದರಿಗಳನ್ನೇ ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುವಂತೆ ಆ್ಯಪಲ್ ಸೂಚಿಸಿದೆ.
ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸಲು ಮತ್ತು ವರ್ಷಾಂತ್ಯದ ಕೊಡುಗೆಗಳಿಗೆ ಪೂರಕವಾಗಿ ಹೆಚ್ಚಿನ ಸಂಖ್ಯೆಯ ಐಫೋನ್ 14 Pro ಮಾದರಿಗಳನ್ನು ಮಾರಾಟ ಮಾಡಲು ಆ್ಯಪಲ್ ಮುಂದಾಗಿದೆ.
ಪ್ರೊ ಸರಣಿಯಲ್ಲಿ ಐಫೋನ್ 14 Pro ಮತ್ತು ಐಫೋನ್ 14 Pro ಮ್ಯಾಕ್ಸ್ ಮಾದರಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ.
ಆದರೆ ಐಫೋನ್ 14 ಸಾಮಾನ್ಯ ಸಂಖ್ಯೆಯ ಬೇಡಿಕೆ ಹೊಂದಿದೆ. ಹೀಗಾಗಿ ಐಫೋನ್ 14 ಬದಲಿಗೆ, ಐಫೋನ್ 14 Pro ಮಾದರಿಗಳತ್ತ ಹೆಚ್ಚಿನ ಗಮನ ಹರಿಸಲು ಆ್ಯಪಲ್ ಮುಂದಾಗಿದ್ದು, ಕನಿಷ್ಠ ಐದು ಘಟಕಗಳಲ್ಲಿ ಉತ್ಪಾದನೆ ಏರಿಕೆಗೆ ಕ್ರಮ ಕೈಗೊಂಡಿದೆ ಎಂದು ವರದಿಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.