ADVERTISEMENT

ಅತ್ಯಾಧುನಿಕ ಸೌಂಡ್‌ಬಾರ್‌ಗಳೊಂದಿಗೆ ದೇಶದ ಆಡಿಯೊ ಮಾರುಕಟ್ಟೆಗೆ ಬಂದ 'ಥಾಮ್ಸನ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2024, 11:51 IST
Last Updated 20 ಸೆಪ್ಟೆಂಬರ್ 2024, 11:51 IST
   

ನವದೆಹಲಿ: ದೇಶದ ಆಡಿಯೊ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಫ್ರಾನ್ಸ್‌ನ ಎಲೆಕ್ಟ್ರಾನಿಕ್‌ ಬ್ರಾಂಡ್‌ ಥಾಮ್ಸನ್‌, 'ಆಲ್ಫಾಬೀಟ್‌25' (AlphaBeat25), 'ಆಲ್ಫಾಬೀಟ್‌60' (AlphaBeat60) ಮಾದರಿಯ ಎರಡು ಟಿವಿ ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ.

ಮುಂದಿನ ಆರು ತಿಂಗಳಲ್ಲಿ ಸುಮಾರು 20 ವಿಭಿನ್ನ ಆವೃತ್ತಿಗಳನ್ನು ಪರಿಚಯಿಸುವ ಗುರಿ ಹಾಕಿಕೊಂಡಿರುವ ಕಂಪನಿ, 'ಮೇಕ್‌ ಇನ್‌ ಇಂಡಿಯಾ' ಯೋಜನೆ ಅಡಿಯಲ್ಲಿ ಸೌಂಡ್‌ಬಾರ್‌ ತಯಾರಿಕೆಗೆ ₹ 50 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ ನೂತನ ತಯಾರಿಕಾ ಘಟಕ ತೆರೆದಿದ್ದು, ವರ್ಷದಲ್ಲಿ ಸುಮಾರು 5 ಲಕ್ಷ ಸ್ಪೀಕರ್‌ಗಳನ್ನು (ಸೌಂಡ್‌ಬಾರ್‌) ತಯಾರಿಸುವ ಯೋಜನೆಯಲ್ಲಿದೆ.

ADVERTISEMENT

ಗ್ರಾಹಕರಿಗೆ ಸಾಟಿಯಿಲ್ಲದ ಅನುಭವ ನೀಡುವ, ಆಕರ್ಷಕ ವಿನ್ಯಾಸದ 'ಆಲ್ಫಾಬೀಟ್‌25' ಸೌಂಡ್‌ಬಾರ್‌, ವೈರ್‌ ಹಾಗೂ ವೈರ್‌ಲೆಸ್‌ ಮಾದರಿಗಳಲ್ಲಿ ಲಭ್ಯವಿದೆ. 'ಆಲ್ಫಾಬೀಟ್‌60' ಉತ್ಪನ್ನದಲ್ಲಿ ವೈರ್‌ ಅಳವಡಿಕೆ ಸೌಲಭ್ಯವಷ್ಟೇ ಇದೆ.

'ಆಲ್ಫಾಬೀಟ್‌25', 82Hz - 20kHz ಫ್ರೀಕ್ವೆನ್ಸಿ ಸಾಮರ್ಥ್ಯ ಹೊಂದಿದ್ದು, ಬ್ಲೂಟೂತ್‌, AUX IN, USB ಕನೆಕ್ಟಿವಿಟಿ ಸೌಕರ್ಯ ಹೊಂದಿದೆ. 35Hz-20kHz ಫ್ರೀಕ್ವೆನ್ಸಿ ಸಾಮರ್ಥ್ಯವುಳ್ಳ 'ಆಲ್ಫಾಬೀಟ್‌60', ಬ್ಲೂಟೂತ್‌, AUX IN, USB ಜೊತೆಗೆ ರಿಮೋಟ್‌ ಕಂಟ್ರೋಲ್‌ ವಿಶೇಷತೆಯನ್ನೂ ಒಳಗೊಂಡಿದೆ.

ಈ ಸೌಂಡ್‌ಬಾರ್‌ಗಳು ನಾಳೆಯಿಂದ (ಸೆ.21) ಫ್ಲಿಪ್‌ಕಾರ್ಟ್‌ನಲ್ಲಿ ಕ್ರಮವಾಗಿ ₹ 1,699 ಮತ್ತು ₹ 3,899ಕ್ಕೆ ಸಿಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.