ನವದೆಹಲಿ: ಸ್ಯಾಮ್‌ಸಂಗ್‌ನ ಇತ್ತೀಚಿನ ‘ಗ್ಯಾಲಕ್ಸಿ ಎ’ ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಇಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಜನಪ್ರಿಯ ‘ಗ್ಯಾಲಕ್ಸಿ ಎ’ ಸರಣಿಗೆ ಹೊಸ ವೈಶಿಷ್ಟ್ಯತೆ ಸೇರ್ಪಡೆಯಾಗಿದ್ದು, ನಾವೀನ್ಯತೆ ಮತ್ತು 5G ಸಂಪರ್ಕ ಸೇವೆ ನೀಡುವ ಗುರಿಯನ್ನು ಸ್ಯಾಮಸಂಗ್ ಹೊಂದಿದೆ.
ಹೊಸ ‘ಫ್ಲೋಟಿಂಗ್ ಕ್ಯಾಮೆರಾ ಸೆಟಪ್’ ಮತ್ತು ‘ಮೆಟಲ್ ಕ್ಯಾಮೆರಾ ಡೆಕೊ’ ಫೋನಿನ ಬಣ್ಣಕ್ಕೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಎರಡೂ ಫೋನ್‌ಗಳು ಶಕ್ತಿಯುತ ಕ್ಯಾಮೆರಾ ವ್ಯವಸ್ಥೆಗಳನ್ನು ಹೊಂದಿವೆ. ಗ್ಯಾಲಕ್ಸಿ A54 5G ಫೋನಿನಲ್ಲಿ 50ಎಂಪಿ ಒಐಎಸ್ ‘ಪ್ರೈಮರಿ ಲೆನ್ಸ್’ ಮತ್ತು 12ಎಂಪಿ ‘ಅಲ್ಟ್ರಾ-ವೈಡ್ ಲೆನ್ಸ್’ ಇದೆ. ಗ್ಯಾಲಕ್ಸಿ A34 5G ಫೋನಿನಲ್ಲಿ 48ಎಂಪಿ ಒಐಎಸ್ ‘ಪ್ರೈಮರಿ ಲೆನ್ಸ್‘ ಮತ್ತು 8ಎಂಪಿ ‘ಅಲ್ಟ್ರಾ–ವೈಡ್ ಲೆನ್ಸ್’ ಇದೆ. ಇದರ ಜತೆಗೆ ಎರಡೂ ಫೋನ್‌ಗಳಲ್ಲಿ 5 ಎಂಪಿ ‘ಮ್ಯಾಕ್ರೋ ಲೆನ್ಸ್’ ಕೂಡ ಇದೆ. ಎರಡೂ ಮಾದರಿಗಳು 'ನೈಟೋಗ್ರಫಿ' ಎಂಬ ವೈಶಿಷ್ಟ್ಯವನ್ನು ಒಳಗೊಂಡಿದ್ದು, ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ, ವಿಡಿಯೊ ತೆಗೆಯಲು ಸಾಧ್ಯವಿದೆ. ಹೆಚ್ಚುವರಿಯಾಗಿ ಸೂಪರ್ AMOLED ಡಿಸ್‌ಪ್ಲೇಗಳು, ಡಾಲ್ಬಿ ಸ್ಟಿರಿಯೊ ಸ್ಪೀಕರ್‌ಗಳು ಈ ಫೋನ್‌ಗಳಲ್ಲಿವೆ.
ಗ್ಯಾಲಕ್ಸಿ A54 5G ಮತ್ತು A34 5G ಸ್ಮಾರ್ಟ್‌ಫೋನ್‌ಗಳು IP67 ರೇಟಿಂಗ್ ಹೊಂದಿವೆ. ಈ ಫೋನ್‌ಗಳು ಕೆಳಗೆ ಬಿದ್ದು ಹಾನಿಯಾಗುವ ಸಾಧ್ಯತೆಗಳು ಕಡಿಮೆ. ಅದಕ್ಕೆ ಸೂಕ್ತವಾಗಿ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಎರಡೂ ಸಾಧನಗಳ ಡಿಸ್‌ಪ್ಲೇಗಳೂ ‘ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5’ ರಕ್ಷಣೆ ಹೊಂದಿವೆ. ಬಿದ್ದು ಹಾನಿಗೊಳ್ಳುವುದು, ತರಚಿಕೊಳ್ಳುವುದರಿಂದ ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಿದೆ. ಗ್ಯಾಲಕ್ಸಿ A54 5G ಹಿಂಭಾಗದ ಪ್ಯಾನೆಲ್‌ನಲ್ಲಿ ಗೊರಿಲ್ಲಾ ಗ್ಲಾಸ್ 5 ಇದೆ. ಹೀಗಾಗಿ ಮೊಬೈಲ್‌ನ ಬಾಳಿಕೆ ಹೆಚ್ಚು.
ಗ್ಯಾಲಕ್ಸಿ A54 5G ಮತ್ತು A34 5G ಸಾಧನಗಳು ‘ಸ್ಯಾಮ್‌ಸಂಗ್ ಡಿಫೆನ್ಸ್-ಗ್ರೇಡ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್ ನಾಕ್ಸ್’ನೊಂದಿಗೆ ಉನ್ನತ ದರ್ಜೆಯ ಸುರಕ್ಷತೆ ಹೊಂದಿವೆ. ಇದು ಬಳಕೆದಾರರ ವೈಯಕ್ತಿಕ ದತ್ತಾಂಶವನ್ನು ಕಾಪಾಡುತ್ತವೆ. ನಾಲ್ಕು ಒಎಸ್ ಅಪ್ಡೇಟ್, 5 ವರ್ಷಗಳ ಭದ್ರತಾ ನವೀಕರಣಗಳು ಲಭ್ಯವಿರುವುದರಿಂದ ಈ ಫೋನ್‌ಗಳು ಯಾವಾಗಲು ನವನವೀನ ಮತ್ತು ಸುರಕ್ಷಿತ ಎಂಬ ಅನುಭವ ಸಿಗಲಿದೆ.
ಮೆಮೊರಿ, ಬೆಲೆ, ಆಫರ್‌ಗಳ ವಿವರ
ಎರಡೂ ಸಾಧನಗಳು ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಮತ್ತು ಪಾಲುದಾರ ಮಳಿಗೆ, Samsung.com ಮತ್ತು ಇತರ ಆನ್‌ಲೈನ್ ವೇದಿಕೆಗಳಲ್ಲಿ ಮಾರ್ಚ್ 28 ರಿಂದ ಸುಲಭ ಇಎಂಐ ಸೌಲಭ್ಯದೊಂದಿಗೆ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.