ನವದೆಹಲಿ: ಎಚ್‌ಎಂಡಿ ಮೊಬೈಲ್ ಕಂಪನಿ ಹೊಸ ಸ್ಮಾರ್ಟ್‌ಫೋನ್‌ಗಳಾದ ಎಚ್‌ಎಂಡಿ ಕ್ರೆಸ್ಟ್(HMD Crest) ಮತ್ತು ಎಚ್‌ಎಂಡಿ ಕ್ರೆಸ್ಟ್ ಮ್ಯಾಕ್ಸ್ 5ಜಿ(HMD Crest Max 5G) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಫೋನ್‌ಗಳು 6.67 ಇಂಚಿನ ಎಫ್‌ಎಚ್‌ಡಿ+ ಇಎಲ್‌ಇಡಿ ಪರದೆ ಹೊಂದಿದ್ದು, ಆಕರ್ಷಕ ಕ್ಯಾಮರಾ, ಉತ್ತಮ ಬ್ಯಾಟರಿ ಸೇರಿದಂತೆ ಅನೇಕ ಫೀಚರ್‌ಗಳನ್ನು ಹೊಂದಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎಚ್‌ಎಂಡಿ ಕ್ರೆಸ್ಟ್ ಉತ್ತಮ ಕ್ಯಾಮೆರಾ ವಿನ್ಯಾಸ ಹೊಂದಿದ್ದು, 50MP ಸೆಲ್ಫಿ ಕ್ಯಾಮೆರಾ ಮತ್ತು 50 MP ಡ್ಯುಯಲ್ ಎಐ ಹಿಂಬದಿ ಕ್ಯಾಮೆರಾ ಹೊಂದಿದೆ. ಎಚ್‌ಎಂಡಿ ಕ್ರೆಸ್ಟ್ ಮ್ಯಾಕ್ಸ್ 5ಎಂಪಿ ಅಲ್ಟ್ರಾವೈಡ್ ಹಾಗೂ 2ಎಂಪಿ ಮ್ಯಾಕ್ರೊ ಲೆನ್ಸ್‌ನೊಂದಿಗೆ 64ಎಂಪಿ ಹಿಂಬದಿ ಕ್ಯಾಮೆರಾ ಹೊಂದಿದೆ. ಸೆಲ್ಪಿ ಕ್ಯಾಮೆರಾ 50ಎಂಪಿ ಇದೆ.
ಈ ಫೋನ್‌ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5000mAh ಬ್ಯಾಟರಿ ಇದೆ. 33W ವೇಗದಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ.
ಎಚ್‌ಎಂಡಿ ಕ್ರೆಸ್ಟ್ ಮ್ಯಾಕ್ಸ್ 16GB RAM (8GB + 8GB) ಮತ್ತು 256GB ಸ್ಟೋರೇಜ್ ಆಯ್ಕೆಗೆ 14,999 ಬೆಲೆ ಹೊಂದಿದ್ದರೆ. ಎಚ್‌ಎಂಡಿ ಕ್ರೆಸ್ಟ್ 12GB RAM (6GB + 6GB) ಮತ್ತು 128 GB ಸ್ಟೋರೇಜ್ ಆಯ್ಕೆಗೆ 12,999 ಬೆಲೆ ನಿಗದಿಪಡಿಸಲಾಗಿದೆ.
ಎಚ್‌ಎಂಡಿ ಕ್ರೆಸ್ಟ್ ಮಿಡ್‌ನೈಟ್ ಬ್ಲೂ, ರಾಯಲ್ ಪಿಂಕ್ ಮತ್ತು ಲಶ್ ಲಿಲಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದ್ದರೆ, ಎಚ್‌ಎಂಡಿ ಕ್ರೆಸ್ಟ್ ಮ್ಯಾಕ್ಸ್ ಡೀಪ್ ಪರ್ಪಲ್, ರಾಯಲ್ ಪಿಂಕ್ ಮತ್ತು ಆಕ್ವಾ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.