ನವದೆಹಲಿ: ‘ಎಚ್‌ಎಂಡಿ’ ಮೊಬೈಲ್ ಕಂಪನಿ ಇಂದು ತನ್ನ ಮೊದಲ ಫೀಚರ್ ಫೋನ್‌ಗಳಾದ ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110 ಎಂಬ ಎರಡು ಫೀಚರ್ ಫೋನ್‌ಗಳನ್ನು (HMD 105 ಮತ್ತು HMD 110) ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ವಿಶೇಷವೆಂದರೆ ಈ ಫೋನ್‌ಗಳಲ್ಲಿ ಇಂಟರ್‌ನೆಟ್‌ನ ಅಗತ್ಯ ಇಲ್ಲದೆಯೇ ಯುಪಿಐ ಸೇವೆಯನ್ನು ಬಳಸಬಹುದು.
ಈ ಎರಡೂ ಫೋನ್‌ಗಳು ಪ್ರೀಮಿಯಂ ವಿನ್ಯಾಸ ಹೊಂದಿವೆ. ಕೈಯಲ್ಲಿ ಆರಾಮದಾಯಕವಾಗಿ ಇರುವಂತೆ ಮತ್ತು ಅನುಕೂಲಕರ ಗಾತ್ರದಲ್ಲಿ ತಯಾರಿಸಲಾಗಿದೆ.
ಫೋನ್ ಟಾಕರ್, ಕಾಲ್ ರೆಕಾರ್ಡಿಂಗ್, ಎಂಪಿ3 ಪ್ಲೇಯರ್, ವಯರ್ಡ್ ಮತ್ತು ವೈರ್‌ಲೆಸ್ ಎಫ್‌ಎಂ ರೇಡಿಯೊ, ಎಚ್‌ಎಂಡಿ 105-ಗೆ ಶಕ್ತಿಯುತ ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್, ಎಚ್‌ಎಂಡಿ 110-ಗೆ ಪ್ರೀಮಿಯಂ ಕ್ಯಾಮೆರಾ ವಿನ್ಯಾಸ ಒಳಗೊಂಡಿದೆ.
ಈ ಫೋನ್‌ಗಳು 1,000 ಎಂಎಎಚ್ ಬ್ಯಾಟರಿ ಒಳಗೊಂಡಿದೆ. ಇದು 18 ದಿನಗಳವರೆಗೆ ವಿಸ್ತೃತ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಕನ್ನಡವೂ ಸೇರಿದಂತೆ 9 ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತವೆ.
ಎಚ್‌ಎಂಡಿ 105 ಭಾರತದಲ್ಲಿ ಇಂದಿನಿಂದ ಕಪ್ಪು, ನೇರಳೆ ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಎಚ್‌ಎಂಡಿ 110- ಕಪ್ಪು ಮತ್ತು ಹಸಿರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಫೋನ್‌ಗಳು ಎಲ್ಲಾ ರಿಟೇಲ್ ಮಳಿಗೆಗಳಲ್ಲಿ, ಇ-ಕಾಮರ್ಸ್ ಅಂತರ್ಜಾಲ ತಾಣಗಳಲ್ಲಿ ಮತ್ತು HMD.com ತಾಣದಲ್ಲಿ ಖರೀದಿಗೆ ಲಭ್ಯ ಇರಲಿವೆ.
ಈ ಬಗ್ಗೆ ಮಾತನಾಡಿರುವ ಎಚ್‌ಎಂಡಿ ಗ್ಲೋಬಲ್‌ನ ಭಾರತ ಹಾಗೂ ಎಪಿಎಸಿ ಉಪಾಧ್ಯಕ್ಷ ರವಿ ಕುನ್ವರ್ ಅವರು, 'ಎಚ್‌ಎಂಡಿ 105 ಮತ್ತು ಎಚ್‌ಎಂಡಿ 110- ಫೀಚರ್ ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ನಮ್ಮ ಮೊದಲ ಫೀಚರ್ ಫೋನ್‌ಗಳಾಗಿವೆ. ಹೊಸ ತಂತ್ರಜ್ಞಾನದ ಪ್ರಯೋಜನಗಳನ್ನು ಗ್ರಾಹಕರಿಗೆ ಸುಲಭವಾಗಿ ಒದಗಿಸುವ ನಮ್ಮ ಬದ್ಧತೆಗೆ ಇವು ನಿದರ್ಶನಗಳಾಗಿವೆ' ಎಂದು ತಿಳಿಸಿದ್ದಾರೆ.
ಬೆಲೆ– ಎಚ್‌ಎಂಡಿ 105 ₹999, ಎಚ್‌ಎಂಡಿ 110 –₹1,199
ಫಿನ್ಲೆಂಡ್ ಮೂಲದ ಎಚ್‌ಎಂಡಿ ಕಂಪನಿ, ನೋಕಿಯಾ ಕಂಪನಿಯ ಸ್ಮಾರ್ಟ್‌ಫೋನ್ ಹಾಗೂ ಫೀಚರ್ ಫೋನ್‌ಗಳನ್ನು ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.