ಸ್ಮಾರ್ಟ್ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್ ವಿಭಾಗದಲ್ಲಿ ವಹಿವಾಟನ್ನು ಪ್ರಾರಂಭಿಸಿದೆ. ಕೈಗೆಟುವ ಬೆಲೆಯಲ್ಲಿ Honor Pad 9 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ವಿಸ್ತಾರವಾದ ಡಿಸ್‌ಪ್ಲೇ , ದೀರ್ಘಬಾಳಿಕೆಯ ಬ್ಯಾಟರಿಯನ್ನು ಈ ಪ್ಯಾಡ್ ಹೊಂದಿದೆ. ವಿನ್ಯಾಸದಲ್ಲಿ ಬಹಳ ತೆಳುವಾಗಿದ್ದು, 6.96mm ದಪ್ಪವಿದೆ. 555 ಗ್ರಾಂ ತೂಗುತ್ತದೆ. ಯುಎಸ್‌ಬಿ ಟೈಪ್–ಸಿ ಚಾರ್ಜಿಂಗ್ ವ್ಯವಸ್ಥೆ ಇದೆ. 8300 ಎಂಎಎಚ್ ಬ್ಯಾಟರಿ ಇದ್ದು, 35 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
13 ಎಂಪಿ ಹಿಂಬದಿ ಕ್ಯಾಮರಾ ಮತ್ತು 8ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ. ಉತ್ತಮ ಆಡಿಯೊ ಗುಣಮಟ್ಟಕ್ಕಾಗಿ 8 ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. 8 ಜಿಬಿಯ LPDDR4X ಮೆಮೊರಿ ಹೊಂದಿದ್ದು, 128GB ಹಾಗೂ 256GB ಫ್ಲ್ಯಾಶ್ ಮೆಮೊರಿಯೊಂದಿಗೆ ಸ್ಟೋರೇಜ್ ಸೌಲಭ್ಯವಿದೆ. ಇದಲ್ಲದೆ, ಬಳಕೆದಾರರು ಮೆಮೊರಿ ಕಾರ್ಡ್ ಅನ್ನು ಬಳಸಿಕೊಂಡು 1ಟಿಬಿ ವರೆಗೆ ಮೆಮೊರಿ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಕಂಪನಿ ನಿಗದಿಪಡಿಸಿದ ಬೆಲೆಯು ₹24,999 ಇದ್ದು, ₹2000 ಸಾವಿರ ಮಾರಾಟದ ರಿಯಾಯಿತಿ ಪಡೆಯುವ ಮೂಲಕ ₹22,999 ಬೆಲೆಗೆ ಖರೀದಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.