ನವದೆಹಲಿ: ಸ್ಮಾರ್ಟ್ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್ ವಿಭಾಗದಲ್ಲಿ ‘ಹಾನರ್ ಪ್ಯಾಡ್ ಎಕ್ಸ್8ಎ’ ಎಂಬ ಹೊಸ ಮಾದರಿಯನ್ನು ಪರಿಚಯಿಸಿದೆ.
ಮಕ್ಕಳು ಸುಲಭವಾಗಿ ಬಳಸಲು ಯೋಗ್ಯವಾಗುವಂತೆ ಹಾನರ್ ಪ್ಯಾಡ್ ಎಕ್ಸ್8ಎ ಅನ್ನು ವಿನ್ಯಾಸಗೊಳಿಸಿ, ಪರಿಚಯಿಸಲಾಗಿದೆ. ಹೀಗಾಗಿ ಇದನ್ನು ‘ನಡಾಲ್ ಕಿಡ್ಸ್’ ಆವೃತ್ತಿ ಎಂದೇ ಕರೆಯಲಾಗಿದೆ. ಮಕ್ಕಳ ಸುರಕ್ಷತೆ, ಸಾಧನದ ಸುರಕ್ಷತೆ, ಆಹಾರ ಸುರಕ್ಷತೆಯ ಖಾತ್ರಿ ಇರುವ ಸಿಲಿಕಾನ್ ಪದಾರ್ಥದಿಂದ ಸಿದ್ಧಪಡಿಸಲಾಗಿದೆ. ಜತೆಗೆ ಶಾಕ್‌ಪ್ರೂಫ್ ಕೂಡಾ ಹೌದು.
ನಡಾಲ್ ಕಿಡ್ಸ್ ಆವೃತ್ತಿಯು ಮಕ್ಕಳ ಸ್ನೇಹಿ ಸ್ಟೈಲಸ್ ಒಳಗೊಂಡಿದೆ. ಇದು ಮಕ್ಕಳಿಗೆ ಮಿತಿಯಿಲ್ಲದೆ ಡೂಡಲ್ ಮಾಡಲು, ಬರೆಯಲು ಮತ್ತು ಕಲಿಯಲು ಅನುವು ಮಾಡಿಕೊಡಲಿದೆ. ಜತೆಗೆ, ಕಣ್ಣಿಗೆ ಹಾನಿಯಾಗದಂತೆ ‘ಐ ಕಂಫರ್ಟ್’ ಮೋಡ್ ಸೌಲಭ್ಯ ಹೊಂದಿದೆ. ಇದು ಮಕ್ಕಳಿಗೆ ಪೂರಕವಾಗಿ ಸ್ಕೆಚಿಂಗ್ ಮೋಡ್, ಹ್ಯಾಂಡಲ್ ಮೋಡ್ ಮತ್ತು ವಿಡಿಯೊ ವಾಚಿಂಗ್ ಮೋಡ್ ಆಯ್ಕೆಗಳನ್ನು ನೀಡುತ್ತದೆ.
ವೈಶಿಷ್ಟ್ಯಗಳು
ಹಾನರ್ ಪ್ಯಾಡ್ ಎಕ್ಸ್8ಎ ನಡಾಲ್ ಕಿಡ್ಸ್ ಆವೃತ್ತಿಯು ತೆಳ್ಳನೆಯ 7.25mm ಮೆಟಲ್ ಯುನಿಬಾಡಿ ರಚನೆಯನ್ನು ಹೊಂದಿದ್ದು, ಇದರ ಜೊತೆಗೆ ಇದು 11 ಇಂಚಿನ 90Hz ಐ ಕಂಫರ್ಟ್ ಡಿಸ್‌ಪ್ಲೇ, ಕ್ವಾಡ್-ಸೌಂಡ್ ಸ್ಪೀಕರ್‌ಗಳ ಸೌಲಭ್ಯವನ್ನು ಹೊಂದಿದೆ.
ಈ ಪ್ಯಾಡ್ ಡಿವೈಸ್ RAM Turbo Xನೊಂದಿಗೆ ಸ್ನ್ಯಾಪ್‌ಡ್ರಾಗನ್ 680 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮಲ್ಟಿ ಟಾಸ್ಕ್ ಕೆಲಸಗಳಿಗೆ ಹಾಗೂ ಮಲ್ಟಿ ವಿಂಡೋ ಬಳಕೆಯನ್ನು ಇದು ಸಪೋರ್ಟ್ ಮಾಡುತ್ತದೆ. ಈ ಸಾಧನವು 64GB/128GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಪ್ಯಾಡ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಹಿಂಭಾಗದಲ್ಲಿ 5 ಮೆಗಾ ಪಿಕ್ಸಲ್ ಹಾಗೂ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಒಳಗೊಂಡಿದೆ.
ಈ ಪ್ಯಾಡ್ 8300mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿದೆ. ಇದು 56 ದಿನಗಳ ಸ್ಟ್ಯಾಂಡ್‌ಬೈ ಟೈಮ್ ಅನ್ನು ಒದಗಿಸಲಿದ್ದು, ಹಾಗೆಯೇ 14 ಗಂಟೆಗಳ ಕಾರ್ಟೂನ್ ಪ್ಲೇಬ್ಯಾಕ್ ವೀಕ್ಷಣೆಗೆ ಸಪೋರ್ಟ್ ಮಾಡಲಿದೆ. ಇನ್ನು ಇದು MagicOS 8.0 ಜೊತೆಗೆ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಇದು Wi-Fi 802.11 a/b/g/n/ac ಬ್ಲೂಟೂತ್ v5.1 ಆಯ್ಕೆಗಳನ್ನು ಪಡೆದಿದೆ.
ಬೆಲೆ ಮತ್ತು ಲಭ್ಯತೆ
ಹಾನರ್ ಪ್ಯಾಡ್ ಎಕ್ಸ್8ಎ ನಡಾಲ್ ಕಿಡ್ಸ್ ಆವೃತ್ತಿಯ ಬೆಲೆ ₹13,999ರಷ್ಟಿದೆ. ಆದರೆ, ಸೀಮಿತ ಅವಧಿಗೆ ₹10,999ಕ್ಕೆ ಆಕರ್ಷಕ ಕೊಡುಗೆಯಾಗಿ ನೀಡಲಾಗುತ್ತದೆ ಎಂದು ಕಂಪನಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.