ADVERTISEMENT

ಬಳಕೆದಾರರೇ ರಿಪೇರಿ ಮಾಡಿಕೊಳ್ಳಬಹುದಾದ HMD Skyline ಸ್ಮಾರ್ಟ್‌ ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2024, 14:00 IST
Last Updated 18 ಸೆಪ್ಟೆಂಬರ್ 2024, 14:00 IST
   

ನವದೆಹಲಿ: ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಸಮಸ್ಯೆ ಎದುರಾದರೂ, ಬಳಕೆದಾರರು ತಮ್ಮ ಮನೆಯಲ್ಲೇ ಸರಳವಾಗಿ ದುರಸ್ತಿಗೊಳಿಸಲು ಅನುಕೂಲವಾಗುವಂತಹ HMD Skyline ಹೆಸರಿನ ಸ್ಮಾರ್ಟ್‌ ಫೋನ್ ಅನ್ನು ಹ್ಯೂಮನ್ ಮೊಬೈಲ್ ಡಿವೈಸಸ್ ಸಂಸ್ಥೆಯು ಬಿಡುಗಡೆ ಮಾಡಿದೆ.

ಇದರ ಜೊತೆಗೆ 108 ಎಂಪಿ ಒಐಎಸ್, 50 ಎಂಪಿ ಟೆಲಿ ಮತ್ತು 13ಎಂಪಿ ಅಲ್ಟ್ರಾವೈಡ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೇರಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಒಳಗೊಂಡಿದೆ. 4ಎಕ್ಸ್ ಆಪ್ಟಿಕಲ್ ಜೂಮ್, ಸೆಲ್ಫಿ ಗೆಸ್ಚರ್ಸ್, ಅತ್ಯಾಕರ್ಷಕ 50 ಎಂಎಂ ಚಿತ್ರಗಳಿಗಾಗಿ ಪೋರ್ಟ್ರೇಟ್ ಮೋಡ್ ಸಹ ಇದರಲ್ಲಿದೆ.

ಜೆನ್2 ಸ್ವಯಂ ರಿಪೇರಿ ವೈಶಿಷ್ಟ್ಯವನ್ನು ಇದರಲ್ಲಿ ಪರಿಚಯಿಸಲಾಗಿದೆ. ಒಂದೇ ಒಂದು ಸ್ಕ್ರೂ ಮೂಲಕ ಬ್ಯಾಕ್ ಕವರ್ ತೆರೆಯುವ ಸೌಲಭ್ಯ ಇದರಲ್ಲಿದೆ.

ADVERTISEMENT

ಸೆಪ್ಟೆಂಬರ್ 17ರಿಂದಲೇ ಈ ಸ್ಮಾರ್ಟ್‌ಫೋನ್ ₹35,999ಗೆ Amazon.in, HMD.com ಮತ್ತು ಇತರೆ ಮೊಬೈಲ್ ಶಾಪ್‌ಗಳಲ್ಲೂ ಲಭ್ಯವಿದೆ.

ಟ್ವಿಸ್ಟೆಡ್ ಬ್ಲಾಕ್, ನಿಯೋನ್ ಪಿಂಕ್ ಕಲರ್‌ಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಜೊತೆ ಲಾಂಚ್ ಆಫರ್ ಕಾಂಪ್ಲಿಮೆಂಟರಿಯಾಗಿ 33W ಟೈಪ್ ಸಿ ಚಾರ್ಜರ್ ನೀಡಲಾಗುತ್ತಿದೆ.

HMD Skyline ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು

* ಡಿಸ್‌ಪ್ಲೆ: 6.55 ಇಂಚಿನ ಪೋಲ್ಡ್, ಎಫ್‌ಎಚ್‌ಡಿ+, 144 ಎಚ್‌ಝಡ್‌ ರಿಫ್ರೆಶ್ ರೇಟ್, ಎಚ್‌ಡಿಆರ್‌10

* ಪ್ರೊಸೆಸರ್ : ಕ್ವಾಲ್‌ಕಾಮ್ ಸ್ನ್ಯಾಪ್‌ ಡ್ರ್ಯಾಗನ್ 7 ಜೆನ್ 2

* ರ್‍ಯಾಮ್: 12ಜಿಬಿ

* ಸ್ಟೋರೇಜ್: 256ಜಿಬಿ

* ಹಿಂದಿನ ಕ್ಯಾಮೆರಾ: 108MP ಪ್ರಾಥಮಿಕ (OIS) + 50 MP ಟೆಲಿಫೋಟೋ (4x ಜೂಮ್) + 12 MP ಅಲ್ಟ್ರಾ-ವೈಡ್

* ಮುಂಭಾಗದ ಕ್ಯಾಮರಾ: 50MP (ಆಟೋ ಫೋಕಸ್)

* ಬ್ಯಾಟರಿ: 4600 mAh ರೀಪ್ಲೇಸಬಲ್

* ಚಾರ್ಜಿಂಗ್: 33W ವೈರ್ಡ್, Qi2 ವೈರ್‌ಲೆಸ್ ಚಾರ್ಜಿಂಗ್

* ಆಪರೇಟಿಂಗ್ ಸಿಸ್ಟಮ್: ಆ್ಯಂಡ್ರಾಯ್ಡ್ 14

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.