ಬೆಂಗಳೂರು: ಚೀನಾ ಮೂಲದ ವಿವೊ ಕಂಪನಿಯ ಮತ್ತೊಂದು ಬ್ರ್ಯಾಂಡ್ ಆಗಿರುವ ಐಕ್ಯೂ, ಭಾರತದ ಮಾರುಕಟ್ಟೆಗೆ ನೂತನ ಪ್ರೀಮಿಯಂ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್, ಕಳೆದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಐಕ್ಯೂ ನಿಯೋ 7 5G
ನೂತನ ಐಕ್ಯೂ ಪ್ರೀಮಿಯಂ ಸ್ಮಾರ್ಟ್‌ಫೋನ್, 12 GB RAM ಮತ್ತು 256 GB ಸ್ಟೋರೇಜ್ ಆವೃತ್ತಿ ಮೂಲಕ ದೊರೆಯಲಿದೆ.
6.78 ಇಂಚಿನ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್, ಆ್ಯಂಡ್ರಾಯ್ಡ್ 13 ಓಎಸ್ ಹಾಗೂ 5000mAh ಬ್ಯಾಟರಿ, 120W ಫಾಸ್ಟ್ ಚಾರ್ಜಿಂಗ್ ಹೊಸ ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್‌ನಲ್ಲಿದೆ ಎಂದು ಕಂಪನಿ ತಿಳಿಸಿದೆ. ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2+2 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೂತನ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ.
ಫೆಬ್ರುವರಿ 16ರಂದು ಅಮೆಜಾನ್ ಮೂಲಕ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.