ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ತಯಾರಿಕ ಸಂಸ್ಥೆ ಐಟೆಲ್, ಭಾರತದ ಮಾರುಕಟ್ಟೆಗೆ ನೂತನ ಮಾದರಿಯ ಬಜೆಟ್ ದರದ ಐಟೆಲ್ A26 ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ಆನ್‌ಲೈನ್ ಕ್ಲಾಸ್‌ನಂತಹ ಅವಶ್ಯಕತೆ ಮತ್ತು ಸಾಧಾರಣ ಬಳಕೆಗೆ ಸೂಕ್ತವಾಗುವಂತೆ, ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಐಟೆಲ್ A26 ಸ್ಮಾರ್ಟ್‌ಫೋನ್, ಸೋಶಿಯಲ್ ಟರ್ಬೊ ಎಂಬ ವಿಶೇಷ ಫೀಚರ್ ಹೊಂದಿದ್ದು, ಅದರ ಮೂಲಕ ಬಳಕೆದಾರರು ವಾಟ್ಸ್ಆ್ಯಪ್ ಕರೆ ರೆಕಾರ್ಡ್, ಸ್ಟೇಟಸ್ ಸೇವ್ ಮುಂತಾದ ಆಯ್ಕೆಗಳನ್ನು ನೀಡುತ್ತದೆ.
ತಾಂತ್ರಿಕ ವೈಶಿಷ್ಟ್ಯ
ಐಟೆಲ್ A26 ಸ್ಮಾರ್ಟ್‌ಫೋನ್, 5.7 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ವಾಟರ್‌ಡ್ರಾಪ್ ನಾಚ್ ಹೊಂದಿದೆ. ಜತೆಗೆ 2 GB RAM ಮತ್ತು 32 GB ಸ್ಟೋರೇಜ್ ಆಯ್ಕೆ ಹೊಂದಿದೆ.
ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್ ಜತೆಗೆ VGA ಸೆನ್ಸರ್ ಸಹಿತ ಕ್ಯಾಮರಾ ಮತ್ತು 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದರಲ್ಲಿದೆ. 3020mAh ಬ್ಯಾಟರಿ ಬೆಂಬಲ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಹೊಸ ಐಟೆಲ್ A26 ಸ್ಮಾರ್ಟ್‌ಫೋನ್ ಬೆಲೆ ₹5,999 ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.