ADVERTISEMENT

Itelನಿಂದ IVCO ತಂತ್ರಜ್ಞಾನದ Color Pro 5G ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2024, 11:18 IST
Last Updated 9 ಜುಲೈ 2024, 11:18 IST
   

ಬೆಂಗಳೂರು: ಐಟೆಲ್ ಸಂಸ್ಥೆಯು ವಿಶಿಷ್ಟ ಮುಂದಿನ ಪೀಳಿಗೆಯ ಐವಿಸಿಒ (itel Vivid Colour) ತಂತ್ರಜ್ಞಾನವನ್ನು ಒಳಗೊಂಡ Color Pro 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ.

ಈ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ನ ಹಿಂಭಾಗದ ಫಲಕಕ್ಕೆ ಬಣ್ಣವನ್ನು ಬದಲಾಯಿಸಲು ಅನುಮತಿಸುತ್ತದೆ, ಅದರ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಶೈಲಿ ಪ್ರಜ್ಞೆಯ ಗ್ರಾಹಕರನ್ನು ಆಕರ್ಷಿಸುತ್ತದೆ. ಕಲರ್ ಪ್ರೊ 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಯುವ ಬಳಕೆದಾರರನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ.

₹10 ಸಾವಿರ ರೂಪಾಯಿಗೂ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಐಟೆಲ್, ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ADVERTISEMENT

ಕಳೆದ ವರ್ಷ ₹10 ಸಾವಿರ ರೂಪಾಯಿ ಒಳಗಿನ ಭಾರತದ ಮೊದಲ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಿದ್ದ ಐಟೆಲ್, ಮತ್ತೊಂದು ವಿಶಿಷ್ಟ ಫೀಚರ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳಲ್ಲಿ ಬಿಡುಗಡೆಗೆ ಮುಂದಾಗಿದೆ.

ಇತ್ತೀಚಿನ ಸಿಎಂಆರ್ ವರದಿ ಪ್ರಕಾರ, ಭಾರತದ ಡಿಜಿಟಲ್ ಉತ್ಪನ್ನಗಳ ಉದ್ಯಮವು ಅಗ್ಗದ ದರದ 4ಜಿ ಮತ್ತು 5ಜಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸಿದೆ. ಅದರಲ್ಲೂ ₹10,000ಕ್ಕೂ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯತ್ತ ಚಿತ್ತ ಹರಿಸಲಾಗಿದೆ ಎಂದು ತಿಳಿಸಿದೆ.

ಈ ಸಾಲಿನಲ್ಲಿ ಕೈಗೆಟುಕುವ ಮತ್ತು ಅಗ್ಗದ ದರದ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಐಟೆಲ್ ಅಗ್ರ ಸ್ಥಾನದಲ್ಲಿದೆ ಎಂದು ಹೇಳಿದೆ. ಅಸಮಾನವಾದ ಬೆಲೆಯಲ್ಲಿ ಅತ್ಯುತ್ತಮ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಒದಗಿಸುತ್ತಿರುವ ಐಟೆಲ್‌ಗೆ ಧನ್ಯವಾದ ಎಂದೂ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.