ನವದೆಹಲಿ: ಎಲ್‌ಜಿ ಕಂಪನಿಯು ಹೊಸ ವಿನ್ಯಾಸದ ‘LG MyView’ ಸ್ಮಾರ್ಟ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
ಹೋಮ್ ಆಫೀಸ್ ಮತ್ತು ಮನರಂಜನೆಗಾಗಿ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಎಲ್‌ಜಿ ಕಂಪನಿಯು ಹೊಸ ಮಾನಿಟರ್‌ಗಳನ್ನು webOS23 ಪ್ಲಾಟ್‌ಫಾರ್ಮ್‌ನೊಂದಿಗೆ ಪರಿಚಯಿಸಿದೆ.
ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಒಳಗೊಂಡಿರುವ ಈ ಮಾನಿಟರ್‌ಗಳಲ್ಲಿ ಇನ್‌ಬಿಲ್ಟ್ ವೈ–ಫೈ ಮತ್ತು ಬ್ಲೂಟೂತ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ನೂತನ ಐಪ್ಯಾಡ್ ಏರ್ ಮಾದರಿಯಲ್ಲಿ ಐಒಎಸ್ ಆಂಡ್ರಾಯ್ಡ್ ಸಾಧನಗಳಿಗೆ ಸ್ಕ್ರೀನ್‌ಶೇರ್ ಸೌಲಭ್ಯ ಒದಗಿಸುತ್ತದೆ.
MyView ಸ್ಮಾರ್ಟ್ ಮಾನಿಟರ್‌ಗಳು ವೆಬ್–ಒಎಸ್ ಆಧಾರಿತ ಹಬ್ ಆಗಿ ಕಾರ್ಯನಿರ್ವಹಿಸುತ್ತವೆ. ಜತೆಗೆ ವಿವಿಧ ಸ್ಮಾರ್ಟ್ ಗೃಹೋಪಯೋಗಿ ಉಪಕರಣಗಳಿಗೆ ಲಿಂಕ್ ಮಾಡಲು ಅನುಮತಿಸುತ್ತದೆ ಎಂದು ಕಂಪನಿ ತಿಳಿಸಿದೆ.
LG MyView ಮಾನಿಟರ್‌ಗಳು 27 ಮತ್ತು 32 ಇಂಚಿನ ವಿನ್ಯಾಸದಲ್ಲಿ ಲಭ್ಯವಿದೆ. 27 ಇಂಚಿನ ಮಾನಿಟರ್ ಬೆಲೆ ₹24,500ರಷ್ಟಿದ್ದರೆ, 32 ಇಂಚಿನ ಮಾನಿಟರ್ ಬೆಲೆ ₹28,500 ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.