ನವದೆಹಲಿ: ದೇಶೀಯ ನಿರ್ಮಿತ ಸಮರ್ಥ ಸ್ಮಾರ್ಟ್‌ಫೋನ್ ಹೊರತಂದಿರುವ ಮೈಕ್ರೊಮ್ಯಾಕ್ಸ್ ಇನ್ಫರ್ಮ್ಯಾಟಿಕ್ಸ್ ಲಿಮಿಡೆಟ್, ಚೀನಾ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮೈಕೊಮ್ಯಾಕ್ಸ್ 'ಇನ್ ನೋಟ್ 1' ಬಿಡುಗಡೆ ಮಾಡಿದೆ.
ಶುಕ್ರವಾರ (ಡಿ.18) ಮಧ್ಯರಾತ್ರಿಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಇನ್ ನೋಟ್ 1 ಖರೀದಿಗೆ ಸಿಗಲಿದೆ. 4ಜಿಬಿ + 64ಜಿಬಿ ಮತ್ತು 4ಜಿಬಿ + 128ಜಿಬಿ ಮಾದರಿಗಳಲ್ಲಿ ಬಿಳಿಯ ಹಾಗೂ ಹಸಿರು ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಈ ಫೋನ್ ಬೆಲೆ ಕ್ರಮವಾಗಿ ₹10,999 ಮತ್ತು ₹12,499 ನಿಗದಿಯಾಗಿದೆ.
ಕಡಿಮೆ ಅವಧಿಯಲ್ಲಿಯೇ 'ಇನ್ ನೋಟ್ 1' ಗ್ರಾಹಕರಿಂದ 4.4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಪ್ರೀಮಿಯಂ ವಿನ್ಯಾಸ, ಅಧಿಕ ಸಾಮರ್ಥ್ಯ ಗಮನದಲ್ಲಿರಿಸಿ ಸಿದ್ಧಪಡಿಸಲಾಗಿರುವ ಈ ಫೋನ್‌ನಲ್ಲಿ ಹೈಪರ್ ಎಂಜಿನ್ ಗೇಮಿಂಗ್ ಟೆಕ್ನಾಲಜಿ ಇರುವ ಮೀಡಿಯಾಟೆಕ್ ಹೀಲಿಯೊ ಜಿ85 ಪ್ರೊಸೆಸರ್ ಅಳವಡಿಸಲಾಗಿದೆ. ಸ್ಟಾಕ್ ಆ್ಯಂಡ್ರಾಯ್ಡ್ ಒಎಸ್, 6.67 ಇಂಚು ಎಫ್‌ಎಚ್‌ಡಿ ಮತ್ತು ಪಂಚ್ ಹೋಲ್ ಡಿಸ್‌ಪ್ಲೇ, 5000ಎಂಎಎಚ್ ಬ್ಯಾಟರಿ ಹಾಗೂ 18ವ್ಯಾಟ್ ಟೈಪ್ ಸಿ ಫಾಸ್ಟ್ ಚಾರ್ಜರ್ ನೀಡಲಾಗಿದೆ.
ಇನ್ ನೋಟ್ 1 ಫೋನ್‌ನಲ್ಲಿ 48ಎಂಪಿ ಎಐ ಕ್ವಾಡ್ ಕ್ಯಾಮೆರಾ ಅಳವಡಿಸಲಾಗಿದೆ. ನೈಟ್ ಮೋಡ್, ಸೆಲ್ಫಿಗಾಗಿ ಬ್ಯೂಟಿ ಮೋಡ್ ಜೊತೆಗೆ 16ಎಂಪಿ ಕ್ಯಾಮೆರಾ ಹಾಗೂ ಜಿಫ್ ಪಾರ್ಮ್ಯಾಟ್‌ನಲ್ಲಿ ನೇರವಾಗಿ ಚಿತ್ರೀಕರಿಸುವ ವ್ಯವಸ್ಥೆ ಇದೆ. ಬಾಕ್ಸ್‌ನಲ್ಲಿ ಫೋನ್ ಜೊತೆಗೆ ಅದರ ಬ್ಯಾಕ್ ಕವರ್ ಸಹ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.