ADVERTISEMENT

ಮೈಕ್ರೊಮ್ಯಾಕ್ಸ್‌ನಿಂದ ‘ಇನ್‌’ ಸೀರೀಸ್‌ನ ಎರಡು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ

ನವೆಂಬರ್‌ 24ರಿಂದ ಖರೀದಿಗೆ ಲಭ್ಯ

ಏಜೆನ್ಸೀಸ್
Published 4 ನವೆಂಬರ್ 2020, 9:10 IST
Last Updated 4 ನವೆಂಬರ್ 2020, 9:10 IST
ಚಿತ್ರ ಕೃಪೆ: ಮೈಕ್ರೊಮ್ಯಾಕ್ಸ್ ಇಂಡಿಯಾ ಟ್ವಿಟರ್ ಖಾತೆ
ಚಿತ್ರ ಕೃಪೆ: ಮೈಕ್ರೊಮ್ಯಾಕ್ಸ್ ಇಂಡಿಯಾ ಟ್ವಿಟರ್ ಖಾತೆ   

ನವದೆಹಲಿ: ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೊಮ್ಯಾಕ್ಸ್ ‘ಇನ್‌’ ಸೀರೀಸ್‌ನ ಎರಡು ಸ್ಮಾರ್ಟ್‌ಫೋನ್‌ಗಳನ್ನು (‘ಇನ್ ನೋಟ್ 1’ ಮತ್ತು ‘ಇನ್ 1ಬಿ’) ಮಂಗಳವಾರ ಬಿಡುಗಡೆ ಮಾಡಿದೆ.

‘ಇನ್ ನೋಟ್ 1’ ಆರಂಭಿಕ ಬೆಲೆ ₹10,999 ಹಾಗೂ ‘ಇನ್ 1ಬಿ’ ಆರಂಭಿಕ ಬೆಲೆ ₹6,999 ಆಗಿದೆ.

ನವೆಂಬರ್‌ 24ರಿಂದ ಈ ಸ್ಮಾರ್ಟ್‌ಫೋನ್‌ಗಳು ಮೈಕ್ರೊಮ್ಯಾಕ್ಸ್‌ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿವೆ.

ADVERTISEMENT

‘ಇನ್‌’ ಸೀರೀಸ್‌ ಫೋನ್‌ಗಳು ಮೀಡಿಯಾಟೆಕ್ ಪ್ರೊಸೆಸರ್‌ಗಳನ್ನು ಹೊಂದಿವೆ. ‘ಇನ್ ನೋಟ್ 1’ ಮೀಡಿಯಾಟೆಕ್ ಜಿ85 ಹಾಗೂ ಮತ್ತೊಂದು ಮೀಡಿಯಾಟೆಕ್ ಜಿ35 ಪ್ರೊಸೆಸರ್‌ಗಳನ್ನು ಒಳಗೊಂಡಿವೆ. ಎರಡೂ ಸ್ಮಾರ್ಟ್‌ಫೋನ್‌ಗಳು 5000 ಎಂಎಎಚ್ ಬ್ಯಾಟರಿ ಒಳಗೊಂಡಿವೆ.

ಮೈಕ್ರೊಮ್ಯಾಕ್ಸ್ ‘ಇನ್ 1ಬಿ’ ಬೆಲೆ ₹6,999ರಿಂದ ಆರಂಭಗೊಳ್ಳುತ್ತದೆ. 2 ಜಿಬಿ ರ್‍ಯಾಮ್, 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 4 ಜಿಬಿ ರ್‍ಯಾಮ್‌ ಹಾಗೂ 64 ಜಿಬಿ ಸ್ಟೋರೇಜ್‌ನ ಸ್ಮಾರ್ಟ್‌ಫೋನ್‌ ಬೆಲೆ ₹7,999 ಆಗಿದೆ.

ಮೈಕ್ರೊಮ್ಯಾಕ್ಸ್ ‘ಇನ್ ನೋಟ್ 1’ ಬೆಲೆ ₹10,999ರಿಂದ ಆರಂಭವಾಗುತ್ತದೆ. ಇದು 4 ಜಿಬಿ ರ್‍ಯಾಮ್, 64 ಜಿಬಿ ಸ್ಟೋರೇಜ್ ಹೊಂದಿದೆ. 4 ಜಿಬಿ ರ್‍ಯಾಮ್‌ನ 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ ಫೊನ್ ಬೆಲೆ ₹12,999 ಆಗಿದೆ.

ಇನ್ನಷ್ಟು ಫೀಚರ್ಸ್...

‘ಇನ್‌ ನೋಟ್ 1’

* 6.67 ಇಂಚಿನ ಅಲ್ಟ್ರಾ ಬ್ರೈಟ್ ಫುಲ್ ಎಚ್‌ಡಿ ಡಿಸ್ಪ್ಲೇ
* 48 ಎಂಪಿ ಎಐ ಕ್ವಾಡ್‌ ಕ್ಯಾಮರಾ
* 16 ಎಂಪಿ ಫ್ರಂಟ್ ಕ್ಯಾಮರಾ

‘ಇನ್‌ 1ಬಿ’

* 6.5 ಇಂಚಿನ ಎಚ್‌ಡಿ ಡಿಸ್ಪ್ಲೇ
* 13 ಎಂಪಿ ಎಐ ಡುವಲ್ ಕ್ಯಾಮರಾ, 2ಎಂಪಿ ಡೆಪ್ತ್ ಸೆನ್ಸರ್
* 8 ಎಂಪಿ ಫ್ರಂಟ್ ಕ್ಯಾಮರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.