ADVERTISEMENT

ಮೈಕ್ರೊಸಾಫ್ಟ್‌ನ ಬಹು ಉಪಯೋಗಿ ‘ಸರ್ಫೇಸ್ ಲ್ಯಾಪ್‍ಟಾಪ್ 4’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 12:43 IST
Last Updated 27 ಮೇ 2021, 12:43 IST
ಮೈಕ್ರೊಸಾಫ್ಟ್‌ ಸರ್ಫೇಸ್‌ ಲ್ಯಾಪ್‌ಟಾಪ್‌ 4
ಮೈಕ್ರೊಸಾಫ್ಟ್‌ ಸರ್ಫೇಸ್‌ ಲ್ಯಾಪ್‌ಟಾಪ್‌ 4   

ಬೆಂಗಳೂರು: ಮೈಕ್ರೊಸಾಫ್ಟ್ ಇಂಡಿಯಾ ಕಂಪನಿಯು ಶೈಕ್ಷಣಿಕ ಮತ್ತು ವಾಣಿಜ್ಯಉದ್ದೇಶಗಳ ಬಳಕೆಗೆ ‘ಸರ್ಫೇಸ್ ಲ್ಯಾಪ್‍ಟಾಪ್ 4’ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‍ಟಾಪ್ ಅಮೆಜಾನ್.ಇನ್‍ನಲ್ಲಿ ಲಭ್ಯವಿದೆ. ಕಂಪನಿಯ ವೈವಿಧ್ಯಮಯ ಉತ್ಪನ್ನಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ.ಇದರ ಬೆಲೆಯು ₹ 1,02,999ರಿಂದ ಆರಂಭವಾಗುತ್ತದೆ.

‘ಗ್ರಾಹಕರು ಅಥವಾ ಬಳಕೆದಾರರು ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ. ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ’ ಎಂದು ಮೈಕ್ರೊಸಾಫ್ಟ್‌ ಇಂಡಿಯಾದ ಚೀಫ್ ಆಪರೇಟಿಂಗ್ ಆಫಿಸರ್ ರಾಜೀವ್ ಸೋಧಿ ತಿಳಿಸಿದರು.

13.5 ಮತ್ತು 15 ಇಂಚಿನ ಮಾದರಿಗಳಲ್ಲಿ 3:2 ಪಿಕ್ಸೆಲ್‌ ಸೆನ್ಸ್‌ ಹೈ–ಕಾಂಟ್ರಾಸ್ಟ್‌ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಮತ್ತು ಡಾಲ್ಬಿ ಅಟ್ಮಾಸ್‌ ಓಮ್ನಿಸಾನಿಕ್‌ ಸ್ಪೀಕರ್‌ಗಳಿವೆ. ಬಳಕೆದಾರರು ತಮ್ಮ ನೆಚ್ಚಿನ ಸಿನಿಮಾಗಳನ್ನು ಸಿನೆಮ್ಯಾಟಿಕ್ ಅನುಭವದೊಂದಿಗೆ ವೀಕ್ಷಿಸಿಬಹುದು.

ADVERTISEMENT

ಇದರಲ್ಲಿ ಬಿಲ್ಟ್-ಇನ್ ಎಚ್‍ಡಿ ಫ್ರಂಟ್-ಫೇಸಿಂಗ್ ಕ್ಯಾಮೆರಾ, ಸ್ಟುಡಿಯೋ ಮೈಕ್ರೋಫೋನ್ ಅನ್ನು ಒಳಗೊಂಡಿದೆ. ಲಾರ್ಜ್ ಟ್ರ್ಯಾಕ್‍ಪ್ಯಾಡ್ ಗೆಸ್ಚರ್ ಬೆಂಬಲ ಹೊಂದಿದೆ.

ಇದರಿಂದಾಗಿ ಬಳಕೆದಾರರು ತಮ್ಮ ಆದ್ಯತೆಯ ಕೆಲಸವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ. 11ನೇ ಪೀಳಿಗೆಯ ಇಂಟೆಲ್‌ ಕೋರ್ ಪ್ರೊಸೆಸರ್‌ ಅಥವಾ ಎಎಂಡಿ ರೇಜೆನ್‌ ಮೊಬೈಲ್‌ ಪ್ರೊಸೆಸರ್‌ ಎಂಬ ಎರಡು ಅಯ್ಕೆಯಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.