ನವದೆಹಲಿ: ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಕಂಪನಿ ಮಿವಿ ಎರಡು ನೂತನ ಸೌಂಡ್ ಬಾರ್‌ಗಳನ್ನು ಬಿಡುಗಡೆ ಮಾಡಿದೆ.
ಮೇಡ್ ಇನ್ ಇಂಡಿಯಾ ಶ್ರೇಣಿಯಲ್ಲಿ ‘ಎಸ್ 16’ ಮತ್ತು ‘ಎಸ್ 24’ ಎಂಬ 2 ಸೌಂಡ್ ಬಾರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಭಿನ್ನ ಶೈಲಿ ಮತ್ತು ಪರಿಪೂರ್ಣ ಧ್ವನಿಯನ್ನು ಹೊಂದಿರುವ ಈ ಸೌಂಡ್ ಬಾರ್‌ಗಳನ್ನು ಆಕರ್ಷಕವಾಗಿವಿನ್ಯಾಸಗೊಳಿಸಲಾಗಿದೆ.
ಮಿವಿ ಕಂಪನಿಯ ಈ ಪೋರ್ಟಬಲ್ ಸೌಂಡ್ ಬಾರ್‌ಗಳನ್ನು ಇ–ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ವೈಬ್‌ಸೈಟ್ ಮೂಲಕ ಗ್ರಾಹಕರು ಖರೀದಿ ಮಾಡಬಹುದು. ‘ಎಸ್ 16’ ಸರಣಿಯ ಸೌಂಡ್‌ಬಾರ್ ₹1499 ಮತ್ತು ‘ಎಸ್ 24’ ಸರಣಿಯ ಸೌಂಡ್‌ಬಾರ್ ₹1999ಕ್ಕೆ ದೊರೆಯಲಿವೆ.
ಮುಂದಿನ ಪೀಳಿಗೆಯ ಈ ಸೌಂಡ್ ಬಾರ್‌ಗಳನ್ನು ವಿಶೇಷ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಆಡಿಯೊ ಕ್ಷೇತ್ರದಲ್ಲಿ ನಮ್ಮ ಸೌಂಡ್ ಬಾರ್‌ಗಳು ಹೊಸ ಸೇರ್ಪಡೆಯಾಗಿವೆ. ಸಂಗೀತ ಪ್ರಿಯರಿಗೆ ಕಡಿಮೆ ಬೆಲೆಯಲ್ಲಿ ಇವುಗಳನ್ನು ನೀಡಲಾಗುತ್ತಿದೆ. ಈ ಸೌಂಡ್ ಬಾರ್‌ಗಳಲ್ಲಿ 6 ಗಂಟೆಗಳ ಕಾಲ ಬ್ಯಾಟರಿ ಬರಲಿದೆ. ಇವುಗಳುಹೆಚ್ಚಿನ ಕಾರ್ಯಕ್ಷಮತೆ, ದೀರ್ಘ ಬಾಳಿಕೆ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ಕಂಪನಿಯ ಸಹ ಸಂಸ್ಥಾಪಕ ಮಿದುಲಾ ದೇವಭಕ್ತುನಿ ಹೇಳಿದ್ದಾರೆ.
ಈ ಸೌಂಡ್‌ಬಾರ್‌ಗಳು ಎಯುಎಕ್ಸ್, ಬ್ಯೂಟೂಥ್, 5.1, ಟಿಎಫ್/ ಯುಎಸ್‌ಬಿ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಬೆಂಬಲದೊಂದಿಗೂ ಕೆಲಸ ಮಾಡಲಿವೆ. ದೀರ್ಘ ಕಾಲದಲ್ಲಿ ಹಾಡುಗಳನ್ನು ಕೇಳಬಹುದು ಹಾಗೇ ಗ್ರಾಹಕರಿಗಾಗಿ ಗೂಗಲ್ ಅಸಿಸ್ಟೆಂಟ್ ಸಂಯೋಜನೆ ಮಾಡಲಾಗಿದೆ.
2015ರಲ್ಲಿ ಮಿವಿ ಕಂಪನಿಯನ್ನು ವಿಶ್ವನಾಥ ಕಂದುಲಾ ಮತ್ತು ಮಿಧುಲಾ ದೇವಭಕ್ತುನಿ ಪ್ರಾರಂಭ ಮಾಡಿದರು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಇಯರ್ ಫೋನ್‌ಗಳು ಸೇರಿದಂತೆ ಆಡಿಯೊ ವಿಭಾಗದಲ್ಲಿನ ಹಲವಾರು ಸಾಧನಗಳನ್ನು ಈ ಕಂಪನಿ ಉತ್ಪಾದನೆ ಮಾಡುತ್ತಿದೆ.
ಹೈದರಾಬಾದ್‌ನಲ್ಲಿ ಉತ್ಪಾದನೆ ಘಟಕವನ್ನು ಈ ಕಂಪನಿ ಹೊಂದಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಕಂಪನಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.