ಬೆಂಗಳೂರು: ಗ್ಯಾಜೆಟ್ ಪ್ರಿಯರಿಗಾಗಿ ದೇಶಿ ಕಂಪನಿ ಮಿವಿ, ನೂತನ ಬ್ಲೂಟೂತ್ ಇಯರ್‌ಬಡ್ಸ್ ಪರಿಚಯಿಸಿದೆ.
ಮಿವಿ ಡುವೊಪಾಡ್ಸ್ ಎಫ್50 ದೇಶದಲ್ಲಿ ಬಿಡುಗಡೆಯಾಗಿದ್ದು, ಬ್ಲೂಟೂತ್ 5.1 ಬೆಂಬಲ ಸಹಿತ ಲಭ್ಯವಿದೆ.
ಟೈಪ್–ಸಿ ಚಾರ್ಜಿಂಗ್ ಮೂಲಕ ಮಿವಿ ಡುವೊಪಾಡ್ಸ್ ಇಯರ್‌ಬಡ್ಸ್ ಕೇಸ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ.
ಕಪ್ಪು, ಬೀಜ್, ಕೋರಲ್ ಮತ್ತು ನೀಲಿ ಬಣ್ಣಗಳಲ್ಲಿ ನೂತನ ಮಿವಿ ಡುವೊಪಾಡ್ಸ್ 50 ಇಯರ್‌ಬಡ್ಸ್ ಲಭ್ಯವಾಗಲಿದೆ.
ನಾಯ್ಸ್ ಕ್ಯಾನ್ಸಲೇಶನ್, 50 ಗಂಟೆಗಳ ಪ್ಲೇಟೈಮ್ ಹೊಸ ಮಿವಿ ಇಯರ್‌ಬಡ್ಸ್ ವಿಶೇಷತೆಯಾಗಿದ್ದು, ಆರಂಭಿಕ ಕೊಡುಗೆಯಾಗಿ ಫ್ಲಿಪ್‌ಕಾರ್ಟ್ ಮೂಲಕ ₹999 ಕ್ಕೆ ದೊರೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.