ADVERTISEMENT

iQOO 11 5G: ಸ್ನ್ಯಾಪ್‌ಡ್ರ್ಯಾಗನ್ 8 ಪ್ರೊಸೆಸರ್ ಸಹಿತ ಹೊಸ ಸ್ಮಾರ್ಟ್‌ಫೋನ್

ಐಕ್ಯೂ ಭಾರತದ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2023, 15:42 IST
Last Updated 10 ಜನವರಿ 2023, 15:42 IST
   

ಬೆಂಗಳೂರು: ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ನೂತನ ಮಾದರಿಯನ್ನು ಐಕ್ಯೂ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಐಕ್ಯೂ 11 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. 6.78 ಇಂಚಿನ ಕ್ವಾಡ್‌ ಎಚ್‌ಡಿ+, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆಕ್ಯುರಿಟಿ ಆಯ್ಕೆ ಇದರಲ್ಲಿದೆ.

ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8 ಜೆನ್. 2 ಪ್ರೊಸೆಸರ್, ಅಡ್ರೆನೊ 740 ಗ್ರಾಫಿಕ್ಸ್ ಬೆಂಬಲ, ಆ್ಯಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ 13, 8GB ಮತ್ತು 16GB LPDDR5X RAM ಹಾಗೂ 256 GB ಸ್ಟೋರೇಜ್, 5,000mAh ಬ್ಯಾಟರಿ ಜತೆಗೆ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸಹಿತ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಟೆಲಿಫೋಟೊ ಕ್ಯಾಮೆರಾ ಹೊಂದಿದೆ. ಜತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ
ಹೊಸ ಐಕ್ಯೂ 11 5G ಸ್ಮಾರ್ಟ್‌ಫೋನ್, 8GB RAM + 256GB ಮಾದರಿಗೆ ₹59,999 ದರ ಮತ್ತು 16GB RAM + 256GB ಆವೃತ್ತಿಗೆ ₹64,999 ಬೆಲೆ ಹೊಂದಿದೆ. ಆದರೆ, ಸೀಮಿತ ಅವಧಿಯ ಕೊಡುಗೆಯಾಗಿ ಅಮೆಜಾನ್ ಪ್ರೈಮ್ ಡಿಸ್ಕೌಂಟ್ ಮತ್ತು ಎಚ್‌ಡಿಎಫ್‌ಸಿ/ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆಗೆ ವಿಶೇಷ ಡಿಸ್ಕೌಂಟ್ ಬಳಿಕ ಎರಡೂ ಮಾದರಿಗಳು ಕ್ರಮವಾಗಿ ₹50,999 ಹಾಗೂ ₹55,999 ದರಕ್ಕೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.