ಹೊಸ ವರ್ಷಕ್ಕೆ ಒಪ್ಪೊ ಎಫ್ 15
ಒಪ್ಪೊ ಕಂಪನಿಯು ಹೊಸ ವರ್ಷಕ್ಕೆ ಭಾರತದಲ್ಲಿ ಎಫ್ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಲಿದೆ. ಒಪ್ಪೊ ಎಫ್15 ಶೀಘ್ರವೇ ಬಿಡುಗಡೆ ಮಾಡಲಿದ್ದು, ಅತ್ಯಂತ ತೆಳ್ಳನೆಯ ಮತ್ತು ಆಕರ್ಷಕ ವಿನ್ಯಾಸದಿಂದ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಿದೆ.
ವಿನೂತನ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಎಫ್9 ಪ್ರೊ ಮತ್ತು ಎಫ್11 ಪ್ರೊ ಹ್ಯಾಂಡ್‌ಸೆಟ್‌ಗಳು ಜನಪ್ರಿಯತೆ ಗಳಿಸಿಕೊಂಡಿವೆ. 2016ರಲ್ಲಿ ಸೆಲ್ಫಿ ಎಕ್ಸ್‌ಪರ್ಟ್ ಟ್ಯಾಗ್‌ಲೈನ್ ಮೂಲಕ ಎಫ್ ಸರಣಿಯನ್ನು ಆರಂಭಿಸಲಾಯಿತು. ಆ ಮೂಲಕ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಸೆಲ್ಫಿ ಟ್ರೆಂಡ್‌ಗೆ ಹೊಸ ಆಯಾಮ ನೀಡಿತು.
ಮೆಸೆಂಜರ್ ಬಳಕೆಗೆ ಎಫ್‌ಬಿ ಖಾತೆ ಬೇಕು
ಹೊಸಬರು ಫೋನ್ ನಂಬರ್ ಬಳಸಿ ಫೇಸ್‌ಬುಕ್ ಮೆಸೆಂಜರ್‌ಗೆ ಸೈನ್‌ಇನ್ ಆಗುವ ಆಯ್ಕೆ ಕೈಬಿಡಲಾಗಿದೆ. ಮುಂದೆ ಮೆಸೆಂಜರ್ ಬಳಸಬೇಕಾದರೆ ಫೇಸ್‌ಬುಕ್ ಖಾತೆ ಹೊಂದಿರಲೇಬೇಕು ಎಂದು ಕಂಪನಿ ತಿಳಿಸಿದೆ.
ಹೊಸ ಗ್ರಾಹಕರು ಯಾರು ಫೇಸ್‌ಬುಕ್ ಮೆಸೆಂಜರ್ ಅಥವಾ ಮೆಸೆಂಜರ್ ಲೈಟ್ ಬಳಸಲು ಇಚ್ಛಿಸುತ್ತಾರೋ ಅಂತಹವರು ಮೊಬೈಲ್ ನಂಬರ್ ನೀಡಿ ಬಳಕೆ ಆರಂಭಿಸಲು ಆಗುವುದಿಲ್ಲ. ಸ್ನೇಹಿತರು ಮತ್ತು ಪರಿಚಯಸ್ಥ
ರೊಂದಿಗೆ ಮೆಸೆಂಜರ್ ಮೂಲಕ ಸಂಪರ್ಕ ಸಾಧಿಸಲು ಫೇಸ್‌ಬುಕ್ ಖಾತೆ ಹೊಂದಿರಲೇಬೇಕು ಎಂದು ಸ್ಪಷ್ಟಪಡಿಸಿದೆ.
ಫೇಸ್‌ಬುಕ್ ಖಾತೆ ಇಲ್ಲದೇ, ಮೆಸೆಂಜರ್ ಬಳಸುತ್ತಿದ್ದರೆ ಅಂತಹವರಿಗೆ ಸಮಸ್ಯೆ ಆಗುವುದಿಲ್ಲ ಎಂದಿದೆ. ವಾಟ್ಸ್‌ಆ್ಯಪ್ ಬಳಕೆದಾರರು ಇನ್‌ಸ್ಟಾಗ್ರಾಂ ಖಾತೆ ಹೊಂದಿರುವವರೊಂದಿಗೆ ಸಂವಹನಕ್ಕೆ ಅನುಕೂಲ ಆಗುವಂತೆ ವ್ಯವಸ್ಥೆಗೊಳಿಸುವುದಾಗಿ ಹೇಳಿಕೊಂಡಿದೆ. ಅದಕ್ಕೆ ಪೂರಕವಾಗಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.