ನವದೆಹಲಿ: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾಹೊಸ 4G ಫೀಚರ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ₹4,999 ರಷ್ಟಿದೆ.
ಒಂದು ಕಾಲದಲ್ಲಿ ಐಕಾನಿಕ್ ಮ್ಯೂಸಿಕ್ ಪ್ಲೇಯರ್ ಆಗಿದ್ದ ನೋಕಿಯಾ 5710 ಎಕ್ಸ್‌ಪ್ರೆಸ್ ಮ್ಯೂಸಿಕ್ ಮೊಬೈಲ್, ಇದೀಗ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ವಿಶೇಷವಾಗಿ ಸಂಗೀತ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ಫೋನ್ ಸೆ. 19ರಿಂದ ಆನ್‌ಲೈನ್ ಹಾಗೂ ಮಳಿಗೆಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ವೈಶಿಷ್ಟ್ಯಗಳು...
* ಮೊಬೈಲ್‌ನ ಹಿಂಭಾಗದಲ್ಲಿ ಟ್ರೂ ವೈರ್‌ಲೆಸ್ ಸ್ಟಿರಿಯೊ ಇಯರ್‌ಬಡ್ಸ್ ಸಹಿತ ಲಭ್ಯವಾಗಲಿದ್ದು, ಅದರಲ್ಲಿಯೇ ಇರಿಸಿಕೊಳ್ಳಲು ಸ್ಥಳಾವಕಾಶವಿದೆ.
* 1450mAh ಬ್ಯಾಟರಿ ಈ ಫೋನ್ ಅಧಿಕ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.
*ಹಳೆಯ ಮಾದರಿಯ ಕೀಪ್ಯಾಡ್, ಕ್ಯಾಮೆರಾ, S30+ OS, 48 MB RAM ಮತ್ತು 32 GB ಸ್ಟೋರೇಜ್ ನೂತನ ನೋಕಿಯಾ ಫೋನ್‌ನ ವಿಶೇಷತೆಯಾಗಿದೆ.
* ಮ್ಯೂಸಿಕ್, ವಾಲ್ಯೂಮ್ ಕಂಟ್ರೋಲ್, ಎಫ್‌ಎಂ ಬಟನ್ ಹೊಂದಿದೆ.
* ಬಿಳಿ / ಕೆಂಪು ಮತ್ತು ಕಪ್ಪು / ಕೆಂಪು ಬಣ್ಣಗಳ ಸಂಯೋಜನೆಯಲ್ಲಿ ಫೋನ್ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.