ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನೋಕಿಯಾ, ನೂತನ C01 ಪ್ಲಸ್ ಬಿಡುಗಡೆ ಮಾಡಿದೆ.
ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಲಾಗಿದೆ ಎಂದು ನೋಕಿಯಾ ಹೇಳಿದ್ದು, ಕಡಿಮೆ ದರಕ್ಕೆ 4G ಸ್ಮಾರ್ಟ್‌ಫೋನ್ ಜತೆಗೆ ಉತ್ತಮ ಬ್ಯಾಟರಿ ಬಾಳಿಕೆ ಇರಲಿದೆ ಎಂದು ಕಂಪನಿ ಹೇಳಿದೆ.
ಎರಡು ವರ್ಷಗಳವರೆಗೆ ಸೆಕ್ಯುರಿಟಿ ಅಪ್‌ಡೇಟ್, ಬಲಿಷ್ಠ ವಿನ್ಯಾಸದ ಹೊರಮೈ ಇದರ ವಿಶೇಷತೆಯಾಗಿದೆ ಎಂದು ನೋಕಿಯಾ ಹೇಳಿದ್ದು, 1 ವರ್ಷದ ರಿಪ್ಲೇಸ್‌ಮೆಂಟ್ ಗ್ಯಾರಂಟಿಯನ್ನು ಕೂಡ ನೀಡುತ್ತಿದೆ.
ನೋಕಿಯಾ C01 ಪ್ಲಸ್
5.45 ಇಂಚಿನ ಡಿಸ್‌ಪ್ಲೇ, 2 GB+ 16 GB ಮತ್ತು 2 GB + 32 GB ಸ್ಟೋರೇಜ್ ಆಯ್ಕೆ ಇದರಲ್ಲಿದೆ. 3000mAh ಬ್ಯಾಟರಿ ಬೆಂಬಲ, ಫೇಸ್ ಅನ್‌ಲಾಕರ್ ಸೌಲಭ್ಯವಿದೆ.
ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್ ಮತ್ತು ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಸ ನೋಕಿಯಾ ಫೋನ್‌ನಲ್ಲಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ಮತ್ತು ಲಭ್ಯತೆ
ನೀಲಿ ಮತ್ತು ಬೂದು ಬಣ್ಣದಲ್ಲಿ ನೋಕಿಯಾ ಫೋನ್ ಲಭ್ಯವಿದೆ.
2 GB+ 16 GB ಮಾದರಿಗೆ ₹6,299 ದರ
2 GB + 32 GB ಆವೃತ್ತಿಗೆ ₹6,799 ದರವಿದೆ.
ಜಿಯೋ ಎಕ್ಸ್‌ಕ್ಲೂಸಿವ್ ಆಫರ್ ಮೂಲಕ ಗ್ರಾಹಕರು ಖರೀದಿಸಿದರೆ, ₹600 ಡಿಸ್ಕೌಂಟ್ ಇದ್ದು, ಕ್ರಮವಾಗಿ ₹5,699 ಮತ್ತು ₹6,199 ದರಕ್ಕೆ ದೊರೆಯಲಿದೆ ಎಂದು ನೋಕಿಯಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.